ಸರ್ಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆಯ ದ್ವಿತೀಯ ಪಿ.ಯು.ಸಿ ಫಲಿತಾಂಶ ಶೇ.96

0

ಪುಂಜಾಲಕಟ್ಟೆ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ. ಯು. ಸಿ ಫಲಿತಾಂಶ ಪ್ರಕಟವಾಗಿದ್ದು ಒಟ್ಟು 258 ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಿದ್ದು 247ವಿದ್ಯಾರ್ಥಿಗಳು ತೇರ್ಗಡೆಯಾಗಿ 96% ಫಲಿತಾಂಶ ದಾಖಲಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಭಾಗ್ಯಶ್ರೀ 571, ಕಲಾ ವಿಭಾಗದಲ್ಲಿ ಲತಾಶ್ರೀ 572, ವಿಜ್ಞಾನ ವಿಭಾಗದಲ್ಲಿ ಮೋಕ್ಷ 560 ಅತೀ ಹೆಚ್ಚು ಅಂಕ ಗಳಿಸಿದ್ದಾರೆ. 36 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದ 131 ವಿದ್ಯಾರ್ಥಿಗಳಲ್ಲಿ 127 ವಿದ್ಯಾರ್ಥಿಗಳು ತೇರ್ಗಡೆಯಾಗಿ 97% ಫಲಿತಾಂಶ. 22 ಉನ್ನತ ಶ್ರೇಣಿ, ಪ್ರಥಮ 85, ದ್ವಿತೀಯ 15, ತೃತೀಯ 5.

ಕಲಾ ವಿಭಾಗದಲ್ಲಿ 76 ವಿದ್ಯಾರ್ಥಿಗಳಲ್ಲಿ 72 ವಿದ್ಯಾರ್ಥಿಗಳು ತೇರ್ಗಡೆಯಾಗಿ 95% ಫಲಿತಾಂಶ. 7 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 43 ಪ್ರಥಮ, 17 ದ್ವಿತೀಯ, 5 ತೃತೀಯ ಸ್ಥಾನ.

ವಿಜ್ಞಾನ ವಿಭಾಗದಲ್ಲಿ 51ರಲ್ಲಿ 48 ವಿದ್ಯಾರ್ಥಿಗಳು ತೇರ್ಗಡೆಯಾಗಿ 94% ಫಲಿತಾಂಶ 7 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 39 ಪ್ರಥಮ, 2 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here