

ಕೊಕ್ಕಡ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕೋತ್ಸವ ಎ. 5ರಂದು ಒಕ್ಕಲಿಗರ ಸಮುದಾಯ ಭವನ ನಿವೇಶನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಕೊಕ್ಕಡ ಇದರ ಅಧ್ಯಕ್ಷ ಜಯಂತ್ ಗೌಡ ವಹಿಸಿದ್ದರು.

ಮುಖ್ಯ ಅಥಿತಿಗಳಾಗಿ ಶ್ರೀ ಕ್ಷೇತ್ರ ಆರಿಕೊಡಿ ಇದರ ಧರ್ಮದರ್ಶಿ ಹರೀಶ್ ಆರಿಕೊಡಿ ಮತ್ತು ಮಾತೃ ಸಂಸ್ಥೆ ಬೆಳ್ತಂಗಡಿ ಹಾಗೂ ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ದಕ್ಷಿಣ ಕನ್ನಡ ಗೌಡರ ಯಾನೆ ಒಕ್ಕಲಿಗರ ಯುವ ಘಟಕದ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಕೊಕ್ಕಡ ಗೌಡರ ಯಾನೆ ಒಕ್ಕಲಿಗರ ಸಮುದಾಯ ಭವನ ನಿರ್ಮಾಣದ ಕಟ್ಟಡ ಸಮಿತಿ ಅಧ್ಯಕ್ಷ ಗಣೇಶ್ ಕಲಾಯಿ, ತಾಲೂಕು ಯುವ ಘಟಕದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಬೆಳ್ತಂಗಡಿ ಮಹಿಳಾ ಸಂಘದ ಗೌರವಾಧ್ಯಕ್ಷೆ ಶೋಭಾ ನಾರಾಯಣ ಗೌಡ ದೇವಸ್ಯ ಆಗಮಿಸಿದ್ದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಪೂವಾಜೆ, ಕೊಕ್ಕಡ ಮಹಿಳಾ ಸಂಘದ ಅಧ್ಯಕ್ಷೆ ಶೋಭಾ ನಾರಾಯಣ, ಯುವ ಘಟಕದ ಅಧ್ಯಕ್ಷ ಸುನೀಲ್ ಆಗರ್ತ ಉಪಸ್ಥಿತರಿದ್ದರು.
ವಾರ್ಷಿಕ ವರದಿಯನ್ನು ಪ್ರಶಾಂತ್ ಪೂವಾಜೆ ಮಂಡಿಸಿದರು. ಪ್ರಸ್ತಾವಿಕ ಭಾಷಣವನ್ನು ಪುರಂದರ ಕಡೀರ ನೆರವೇರಿಸಿದರು. ಶೋಭಾ ನಾರಾಯಣ್ ಆಳಂಬಿಲ ಸ್ವಾಗತಿಸಿದರು. ಕೇಶವ ಗೌಡ ಹಳ್ಳಿoಗೇರಿ ಕಾರ್ಯಕ್ರಮ ನಿರೂಪಿಸಿ, ಬಾಲಕೃಷ್ಣ ಬಳಕ್ಕ ಧನ್ಯವಾದವಿತ್ತರು.