

ಕೊಕ್ಕಡ: ಕೊಕ್ಕಡ ಶ್ರೀ ರಾಮ ಮಂದಿರದ ಸಭಾಭವನ ನಡೆಯುವ ಕಾರ್ಯಕ್ರಮಕ್ಕೆ ಅನುಕೂಲವಾಗಲೆಂದು ನೂತನವಾಗಿ ನಿರ್ಮಾಣವಾಗಲಿರುವ ಅಡುಗೆ ಕೋಣೆಯ ಭೂಮಿ ಪೂಜೆಯು ಏ. 6ರಂದು ಬೆಳಿಗ್ಗೆ 10.15ರ ಸುಮಾರಿಗೆ ದೀಪ ಹಚ್ಚಿ ಕೆಸರು ಕಲ್ಲುಹಾಕಿ, ಹಾಲುಎರೆದು, ಕಾಯಿ ಹೊಡೆಯುವ ಮೂಲಕ ನಡೆಯಿತು.
ಬಾಲಕೃಷ್ಣ ನೈಮಿಷ ಮಾತನಾಡಿ ಆದಷ್ಟು ಬೇಗ ಈ ಕಟ್ಟಡವು ನಿರ್ಮಾನವಾಗಿ ಲೋಕಾರ್ಪಣೆಯಾಗಲಿ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವಂತಾಗಲಿ ಎಂದು ಹಾರೈಸಿದರು.
ಸಮಿತಿ ಸದಸ್ಯರು ಮತ್ತು ಊರಿನ ಗಣ್ಯರು, ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕುಶಾಲಪ್ಪ ಗೌಡ ಪೂವಜೆ, ಬಾಲಕೃಷ್ಣ ನೈಮಿಷ, kunchappa ಗೌಡ (ನಿವೃತ್ತ ಅಧ್ಯಾಪಕರು) ಫಣಿರಾಜ್ ಜೈನ್, ಶಶಿ ಕೊಕ್ಕಡ, ಕೀರ್ತನ್ ಭಂಡಾರಿ, ದರ್ಣಪ್ಪ ಕೆಂಪಕೋಡಿ, ಲಕ್ಷ್ಮಿ ನಾರಾಯಣ (ಮಾಜಿ,ತಾ.ಪಂ. ಸದಸ್ಯರು), ಜನಾರ್ಧನ ಬರೆಂಗಾಯ, ಗಣೇಶ್ ಭಟ್ ಹಿತಿಲು, ಪುರುಷೋತ್ತಮ ಕೊಕ್ಕಡ, ಶಾಂತಪ್ಪ ಮಡಿವಾಳ ಕೊಕ್ಕಡ, ಗಣೇಶ್ ದೇವಾಡಿಗ, ರಜನಿಕಾಂತ್ ಅಂಬಿಕಾ ಕ್ಲಿನಿಕ್ ಕೊಕ್ಕಡ ಇವರೆಲ್ಲರೂ ಉಪಸ್ಥಿತರಿದ್ದರು.