

ಬೆಳ್ತಂಗಡಿ: ಬಿಲ್ಲವ ಮಹಿಳಾ ವೇದಿಕೆ ಸದಸ್ಯರು ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ನಡೆಯುತ್ತಿರುವ 65ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನೆ ನೆರವೇರಿಸಿದರು. ಬಳಿಕ 1008 ಮಹಾಮಂಡಲೇಶ್ವರ ಅಧಿಪತಿ ಸ್ಥಾನ ಸ್ವೀಕರಿಸಿದ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾ ನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಗೌರಾವರ್ಪಣೆ ಮಾಡಲಾಯಿತು.
ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್, ಕಾರ್ಯದರ್ಶಿ ಶಾಂಭವಿ ಬಂಗೇರ, ಶ್ರೀ ಗುರುನಾರಾಯಣ ಸ್ವಾಮಿ ಸಂಘದ ನಿರ್ದೇಶಕಿ ವಿನೋದಿನಿ ರಾಮಪ್ಪ, ನಿರ್ದೇಶಕಿ ಜಿ. ಪಂ. ಮಾಜಿ ಸದಸ್ಯೆ ನಮಿತಾ ತೋಟತ್ತಾಡಿ, ಮಹಿಳಾ ವೇದಿಕೆ ಸದಸ್ಯರುಗಳಾದ ಯಶೋಧ ಕುತ್ಲೂರು, ತುಳಸಿ ವಸಂತ್, ಗುಣವತಿ ಕುಕ್ಕೆಡಿ, ಜ್ಯೋತಿ ಮಧ್ವರಾಜ್ ಗೇರುಕಟ್ಟೆ, ನಾಗವೇಣಿ ವಂಜಾರೆ, ಪಲ್ಲವಿ ರಾಜು, ಇಂದಿರಾ ರಂಜಿತ್, ಲೀಲಾವತಿ ಅಚ್ಚಿನಡ್ಕ, ಸುನಿತಾ ಧರ್ಮಸ್ಥಳ, ಶೋಭಾ ಕುವೆಟ್ಟು, ಸುಜಾತಾ ಕುವೆಟ್ಟು, ವೇದಾ ಜೆ. ಪಿ. ಬೆಳಾಲು ಮೊದಲದವರು ಭಾಗವಹಿಸಿದ್ದರು.