

ಪದ್ಮುಂಜ: ಸ. ಹಿ. ಪ್ರಾ. ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಎಸ್. ಡಿ. ಎಂ. ಸಿ ಅಧ್ಯಕ್ಷ ಪುರುಷೋತ್ತಮ ಗೌಡರವರ ಅಧ್ಯಕ್ಷತೆಯಲ್ಲಿ ಜರಗಿತು. ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕಿ ಕೀರ್ತಿಯವರು ಮಾತನಾಡಿ ವಿಧ್ಯಾರ್ಥಿಗಳಿಗೆ ಮುಂದಿನ ಪ್ರೌಢ ಶಿಕ್ಷಣದ ಬಗ್ಗೆ ಹಿತವಚನ ನೀಡಿದರು. ದಾನಿಗಳಾದ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಉಪಾಧ್ಯಕ್ಷೆ ಗೀತಾ, ಎಸ್. ಡಿ. ಎಂ. ಸಿ ಸದಸ್ಯ ಕಾಸಿಂ ಪದ್ಮುಂಜ ಮಾತನಾಡಿ ಶುಭ ಹಾರೈಸಿದರು.

ಅಧ್ಯಾಪಕಿಯರಾದ ನಳಿನಿ, ಪ್ರಣೀತ, ಮೋಕ್ಷಿತ, ಇಂದಿರಾ, ಕಾವ್ಯಶ್ರೀ ಮಾತನಾಡಿ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಡ್ ಸೆಟ್ಟನ್ನು ಕೊಡುಗೆಯಾಗಿ ನೀಡಿದರು. ಶಿಕ್ಷಕಿ ತೇಜಾ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಶಿಕ್ಷಕಿ ಕೀರ್ತಿ ಧನ್ಯವಾದ ಸಲ್ಲಿಸಿದರು.