

ಬೆಳ್ತಂಗಡಿ: ತಾಲೂಕಿನ ದೀಪಾ ಗೋಲ್ಡ್ ಸಮೀಪ ಇರುವ ಆಶಾಕಿರಣ ಕಾಂಪ್ಲೆಕ್ಸ್‌ನಲ್ಲಿ ವಂದನಾ ಬ್ಯೂಟಿಪಾರ್ಲರನ್ನು ರಾಘವೇಂದ್ರ ನರ್ಸಿಂಗ್ ಹೋಮ್ ನ ಎಂ.ಡಿ. ಡಾ. ರೂಪಲತಾ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಮುಂದೆ ಉತ್ತಮ ಗುಣಮಟ್ಟದ ಸೇವೆ ಕೊಡುವ ಮೂಲಕ ಸಂಸ್ಥೆ ಬೆಳೆಯಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಕ್ಲಿನಿಕ್‌ನ ಡಾ. ಜಗನ್ನಾಥ್, ಬೆಳ್ತಂಗಡಿ ಕೆಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಹೆನ್ರಿ ಲೋಬೋ, ನಗರ ಪಂಚಾಯತ್ ಅಧ್ಯಕ್ಷ ಜಯಾನಂದ್ ಗೌಡ, ಧರ್ಮಸ್ಥಳ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಶಾಂಭವಿ ಭಾಸ್ಕರ ರೈ, ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಮಾಲಕಿಯರ ಸಂಘದ ಅಧ್ಯಕ್ಷೆ ರಶ್ಮಿತಾ ಪಿ. ಆಳ್ವ, ಬೆಳ್ತಂಗಡಿ ಫ್ಯಾಷನ್ ಸ್ಟ್ರೀಟ್ ಮಾಲಕಿ ರುಬಿಯಾ ಎಫ್. ಎನ್. ನವಶಕ್ತಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಜಿತೇಂದ್ರ ಕಾರ್ಯಕ್ರಮ ನಿರೂಪಿಸಿ, ಅಂಕಿತಾ ವಂದನಾರ್ಪಣೆ ಗೈದರು.