

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಬೆಳ್ತಂಗಡಿ ಗುರುನಾರಾಯಣ ಸಭಾ ಭವನ ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಾಗು ಏ. 20ರಂದು ಬೆಳ್ತಂಗೆಡಿಗೆ ಭೇಟಿ ನೀಡಲಿರುವ ಉಪ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ರವರ ಪ್ರವಾಸ ಹಾಗು ಕಾರ್ಯಕರ್ತರ ಸಮಾವೇಶದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಅಧ್ಯಕ್ಷ ಸ್ಥಾನ ವಹಿಸಿ ಮಾತಾಡಿದ ಕೆ.ಪಿ..ಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧರಾಗಬೇಕು ಮತ್ತು ಪ್ರತಿ ಬ್ಲಾಕ್ ಮಟ್ಟದಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡ ಬಗ್ಗೆ ತೀರ್ಮಾನ ಕೈಕೊಂಡಿದ್ದು ಕಾರ್ಯಕರತರು ಸಹಕರಿಸಬೇಕೆಂದು ಮನವಿ ಮಾಡಿದರಲ್ಲದೆ ಡಿ.ಕೆ. ಶಿವಕುಮಾರವರ ಬೆಳ್ತಂಗಡಿಯ ಭೇಟಿ ಅದ್ದೂರಿಯಲ್ಲಿ ನಡೆಸುವಲ್ಲಿ ಸರ್ವರ ಬೆಂಬಲ ಕೋರಿದರು.

ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಬಂಗೇರ ಪ್ರಾಸ್ತಾವಿಕವಾಗಿ ಮಾತಾಡಿದರು, ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿದರು. ಪ್ರಮುಖರಾದ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ವಂದನಾ ಭಂಡಾರಿ, ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅಝರ್, ಡಿ.ಸಿ.ಸಿ ಉಪಾಧ್ಯಕ್ಷ ಬಿ. ಎಂ. ಹಮೀದ್ ಉಜಿರೆ, ಕೆ.ಪಿ.ಸಿ.ಸಿ ಸದಸ್ಯ ಕೇಶವ ಗೌಡ ಬೆಳಾಲ್, ಹಿರಿಯ ಕಾಂಗ್ರೆಸ್ ಮುಖಂಡೆ ಲೋಕೇಶ್ವರಿ ವಿನಯಚಂದ್ರ, ಡಿ.ಸಿ.ಸಿ ಸದಸ್ಯ ಸುಭಾಷ್ ರೈ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ ಎಸ್.ಸಿ ಘಟಕದ ಅಧ್ಯಕ್ಷ ನೇಮಿರಾಜ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಪಿ.ಟಿ. ಸಬಾಸ್ಟಿಯನ್, ಭೂನ್ಯಾಯ ಮಂಡಳಿ ಸಮಿತಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ, ಬೊಮ್ಮಣ್ಣ ಗೌಡ ಪುದುವೆಟ್ಟು, ಅಕ್ರಮ ಸಕ್ರಮ ಸಮಿತಿ ಸದಸ್ಯೆ ವಿನುತಾ ರಜತ್ ಗೌಡ, ಪ್ರಶಾಂತ್ ವೇಗಸ್, ಪ್ರವೀಣ್ ಫರ್ನಾಂಡೀಸ್ ಹಳ್ಳಿಮನೆ, ಹನೀಫ್ ಉಜಿರೆ, ಡಿ.ಸಿ.ಸಿ ಸದಸ್ಯೆ ಮೆರಿಟಾ ಪಿಂಟೋ, ಸತೀಶ್ ಹೆಗ್ಡೆ ಬಜಿರೆ, ದಯಾನಂದ ಅಲಂತಿಯಾರ್, ಬಾಲಕೃಷ್ಣ ಭಟ್ ಕಾಮೆಟ್ಟು, ಶ್ರೀಪತಿ ಉಪಾದ್ಯಾಯ ಬಡಕೋಡಿ, ಅಶ್ರಫ್ ಶಾಂತಿನಗರ, ಸುದರ್ಶನ್ ಮಂಜಿಲ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.