

ಬೆಳ್ತಂಗಡಿ: ವಂದನಾ ಬ್ಯೂಟಿ ಪಾರ್ಲರ್ ಏ. 3ರಂದು ಬೆಳ್ತಂಗಡಿ ಆಶಾಕಿರಣ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳ್ತಂಗಡಿ ರಾಘವೇಂದ್ರ ನರ್ಸಿಂಗ್ ಹೋಮ್ ಆಡಳಿತ ನಿರ್ದೇಶಕ ಡಾ. ರೂಪಲತಾ ದೀಪಾ ಪ್ರಜ್ವಲನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರಾಘವೇಂದ್ರ ಕ್ಲಿನಿಕ್ ವೈದ್ಯರಾದ ಡಾ. ಜಗನ್ನಾಥ್ ಎಂ., ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಹೆನ್ರಿ ಲೋಬೋ, ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಾಂಭವಿ ಭಾಸ್ಕರ ರೈ, ಬೆಳ್ತಂಗಡಿ ಬ್ಯೂಟಿಪಾರ್ಲರ್ ಮಾಲಕಿಯಾರದ ಸಂಘದ ಅಧ್ಯಕ್ಷ ರಶ್ಮಿತಾ, ಬೆಳ್ತಂಗಡಿ ಫ್ಯಾಶನ್ ಸ್ಟ್ರೀಟ್ ಮಾಲಕ ರುಬಿಯಾ ಎಫ್.ಎಸ್. ಉಪಸ್ಥಿತಿ ಇರಲಿದ್ದಾರೆ ಎಂದು ವಂದನಾ ಬ್ಯೂಟ್ ಪಾರ್ಲರ್ ಮಾಲಕ ಸವಿತಾ ರಮೇಶ್ ತಿಳಿಸಿದ್ದಾರೆ.
ಸಿಗುವಂತಹ ಸೌಲಭ್ಯಗಳು: ವಧುವಿನ ಮೇಕಪ್, ಪಾರ್ಟಿ ಮೇಕಪ್, ಹೇರ್ ಕಟ್, ಲೇಡಿಸ್ ಟೈಲರಿಂಗ್, ಫೇಶಿಯಲ್, ಹೇರ್ ಸ್ಪಾ, ಥ್ರೆಡಿಂಗ್ ಮತ್ತು ಎಲ್ಲಾ ಸೌಂದರ್ಯಗಳು ಸೇವೆಗಳು ಲಭ್ಯವಿದೆ.