

ಬಂದಾರು: ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಏ. 2ರಿಂದ 10ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೈರೋಳ್ತಡ್ಕ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳು, ಊರ ಭಕ್ತಭಿಮಾನಿಗಳ ಒಗ್ಗೂಡುವಿಕೆಯಲ್ಲಿ ಏ. 1ರಂದು ಶ್ರಮದಾನ ಕಾರ್ಯಕ್ರಮ ನಡೆಯಿತು.
ಕುರಾಯ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಗೌಡ ಮಡ್ಯಲಕಂಡ, ಸಮಿತಿ ಸದಸ್ಯರಾದ ವೆಂಕಟ್ರಮಣ ಗೌಡ ಬಾಳೆಹಿತ್ತಿಳು, ದಮಯಂತಿ ಪಾಂಜಾಳ, ಲಕ್ಷಣ ನಾಯ್ಕ ಮುoಡೂರು, ನಿರಂಜನ ಗೌಡ ನಡುಮಜಲು, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ. ಎ. ಬ್ಯಾಂಕ್ ಉಪಾಧ್ಯಕ್ಷ ಅಶೋಕ ಗೌಡ ಪಾಂಜಾಳ, ನಿರ್ದೇಶಕ ಪ್ರಸಾದ್ ಗೌಡ ಅಂಡಿಲ, ಮೈರೋಳ್ತಡ್ಕ ಒಕ್ಕೂಟ ಸೇವಾಪ್ರತಿನಿಧಿ ಚಂದ್ರಕಲಾ, ಮೈರೋಳ್ತಡ್ಕ ಒಕ್ಕೂಟ ಅಧ್ಯಕ್ಷ ಸುಂದರ ಪೂಜಾರಿ, ಜಾತ್ರೋತ್ಸವ ಸಮಿತಿಯ ಭರತ್ ಗೌಡ ಹಾಗೂ ವಿವಿಧ ಸಂಘ ಸಂಸ್ಥೆ, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.