

ಬಂದಾರು: ಬಟ್ಲಡ್ಕ ಜಮಾಅತ್ ನಲ್ಲಿ ಎ. 17ರಿಂದ 20ರವರೆಗೆ ನಡೆಯಲಿರುವ ಊರುಸ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾ. 31ರಂದು ಈದುಲ್ ಫಿತರ್ ದಿನ ಬಟ್ಲಡ್ಕ ಜಮಾಅತ್ ಅಧ್ಯಕ್ಷ ಮುಹಮ್ಮದ್ ಬಂದಾರು ಅವರು ನೇತೃತ್ವದಲ್ಲಿ ಖತೀಬ್ ಬಹು ಮುಹಮ್ಮದ್ ಆಸಿಫ್ ಸಖಾಫಿ ಬಿಡುಗಡೆಗೊಳಿಸಿ ಮಾತನಾಡಿ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ, ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ, ಜಮಾಅತ್ ನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.