

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ 2 ವರ್ಷಗಳು ದೀನಿ ಕಾರ್ಯದ ನೇತೃತ್ವ ವಹಿಸಿದ್ದ ಹಾಗು ಮಸೀದಿಯ ಖತೀಬರಾಗಿದ್ದ ಅಶ್ರಫ್ ಫೈಝಿ ಅರ್ಕಾನ ರವರನ್ನು ಬೀಳ್ಕೊಡಿಗೆ ಕಾರ್ಯಕ್ರಮ ನಡೆಯಿತು.
ಜಮಾತಿನ ಹಿರಿಯರು ಆಡಳಿತ ಸಮೀತಿ ಮಾಜಿ ಅಧ್ಯಕ್ಷ ಜಲೀಲ್ ಪಿಎಸ್ ಶಾಲು ಹೊದಿಸಿ ಅಭಿನಂಧಿಸಿದರು. ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಖತೀಬರ ಸೇವೆಯನ್ನು ಸ್ಮರಿಸಿದರು. ಪ್ರಮುಖರಾದ ಪಿ.ಪಿ. ಸಖಾಫಿ, ಮೊಹಮ್ಮದ್ ಹಾಜಿ ಯು.ಕೆ., ಅಬ್ದುಲ್ ರಹಿಮಾನ್, ರಫೀಕ್ ಪಡ್ಡ, ಖಾಲಿದ್ ಪುಲಾಬೆ ಮಹಮೂದ್ ಪಿ.ಜೆ., ಅಬ್ದುಸ್ಸಲಾಂ ಶಾಂತಿ ನಗರ, ಇದ್ರಿಸ್ ಪುಲಬೆ, ಅಶ್ರಫ್ ಗಾಂಧಿನಗರ, ಅಶ್ರಫ್ ಕಿರೋಡಿ, ಇರ್ಫಾನ್ ಯು.ಕೆ., ಪಿ.ಎ. ಅಬ್ದುಲ್ ರಹಿಮಾನ್, ಪತ್ರಕರ್ತ ಹೆಚ್. ಮೊಹಮ್ಮದ್ ವೇಣೂರು, ಇಸ್ಮಾಯಿಲ್ ಹೆಚ್. ಪೊಟ್ರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.