

ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ದುರ್ಗಾದೇವಿ) ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ. 30ರಿಂದ ಪ್ರಾರಂಭಗೊಂಡು ಎ. 5ರವರೆಗೆ ನಡೆಯಲಿದೆ.
ಎ. 1ರಂದು ಶ್ರೀ ಕ್ಷೇತ್ರಕ್ಕೆ ಧರ್ಮಸ್ಥಳ ಡಿ. ಹರ್ಷೇಂದ್ರ ಕುಮಾರ್ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಬಂಗಾಡಿ ಅರಸರು ರವಿರಾಜ್ ಬಲ್ಲಾಳ್, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ನಡಕ್ಕರ, ವಾಸುದೇವ ರಾವ್ ಕಕ್ಕಿನೇಜಿ, ಮಿತ್ತಬಾಗಿಲು ಪಿ.ಡಿ.ಒ ಮೋಹನ್ ಬಂಗೇರ, ಕೇಶವ ಫಡಕೆ, ಸುರೇಂದ್ರ ಬನದಬಾಗಿಲು, ವ್ಯವಸ್ಥಾಪನ ಸಮಿತಿಯ ಸದಸ್ಯ ಸತೀಶ್ ಕಾಮತ್ ಕಡಿರುದ್ಯಾವರ, ಉಮೇಶ್ವರಿ ಬೆಡಿಗುತ್ತು, ಸುರೇಶ್ ಪೂಜಾರಿ ಬನದಬಾಗಿಲಿ, ಕೃಷ್ಣಪ್ಪ ಪೂಜಾರಿ ಕಿಲ್ಲೂರು, ಚಂದ್ರಶೇಖರ ಗೌಡ ಹಾಗೂ ಜಾತ್ರಾ ಸಮಿತಿ ಸದಸ್ಯರು, ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.