

ಮುಂಡೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಎ. 22ರಂದು ಜರಗಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮುಂಡೂರು ದೇವಸ್ಥಾನದ ವಠಾರದಲ್ಲಿ ಮಾ. 31ರಂದು ನಡೆಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೀವ ಸಾಲಿಯಾನ್, ಪ್ರಧಾನ ಅರ್ಚಕ ಅರವಿಂದ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಹರಿಶ್ಚಂದ್ರ ಹೆಗ್ಡೆ, ನೀತ ಮಹೇಶ್ ಕುಮಾರ್, ಪುಷ್ಪಾ ಶೆಟ್ಟಿ, ಪುರಂದರ ಆಚಾರ್ಯ, ರಮೇಶ್ ದೇವಾಡಿಗ, ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷ ಶ್ರೀಧರ್ ಅಂಚನ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಅನಿತಾ ಗುರುವಪ್ಪ ಪೂಜಾರಿ, ಅಶೋಕ ಕುಮಾರ್ ಜೈನ್, ವಸಂತ ಪೂಜಾರಿ ನಾನಿಲ್ತಾತ್ಯಾರ್ ಮೊದಲದವರು ಉಪಸ್ಥಿತರಿದ್ದರು.