

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ಇಲ್ಲಿಯ ರಕ್ತೇಶ್ವರಿ ಮತ್ತು ಗುಳಿಗ ದೈವದ ಕಟ್ಟೆ ನವೀಕರ ಮತ್ತು ನೂತನ ಚಾವಣಿ ನಿರ್ಮಾಣದೊಂದಿಗೆ ಕ್ಷೇತ್ರದ ಜಾತ್ರೋತ್ಸವದ ಸಂದರ್ಭ ಮಾ. 30ರಂದು ಕ್ಷೇತ್ರದ ಪ್ರೀಠಾಧೀಶ 1008 ಮಹಾಮಂಡಲೇಶ್ವರ ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ವೈದಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ದೈವದ ನೂತನ ಛಾವಣಿ, ಕಟ್ಟೆಯ ನವೀಕರದ ಸೇವಾಕರ್ತರಾಗಿ ಕನ್ಯಾಡಿ ಶ್ರೀ ಗಣೇಶ್ ಪೈಂಟಿಂಗ್ ಮತ್ತು ಶ್ರೀ ಗಣೇಶ್ ಲಾಡ್ಜ್ ಮಾಲಾಕ ರವೀಂದ್ರ ಪೂಜಾರಿ ಆರ್ಲ ಇವರು ಸಹಕರಿಸಿದರು. ಕಾಮಗಾರಿ ನೆರವೇರಿಸಿದವರನ್ನು ಸ್ವಾಮೀಜಿ ಗೌರವಿಸಿದರು.

ಗುರುದೇವ ಮಠದ ಟ್ರಷ್ಟಿ ತುಕಾರಾಮ ಸಾಲಿಯಾನ್, ವೀಣಾ ರವೀಂದ್ರ ಪೂಜಾರಿ, ದಯಾನಂದ ಪಿ. ಬೆಳಾಲು, ಜಾರಪ್ಪ ಪೂಜಾರಿ ಬೆಳಾಲು ಧರ್ಮಣ ಗೌಡ, ಅರ್ಚಕ ವೃಂದ, ಸಿಬ್ಬಂದಿಗಳು ಉಪಸ್ಥಿತರಿದ್ದರು.