

ಬೆಳ್ತಂಗಡಿ: ಕೋರ್ಟ್ ರಸ್ತೆಯ ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಏ. 11 ಮತ್ತು 12ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಇದರ ಯಶಸ್ವಿಗೆ ಬೆಳ್ತಂಗಡಿ ತಾಲೂಕಿನ ಎಲ್ಲಾ ಸಂಘ ಕುಟುಂಬದ ಅಧ್ಯಕ್ಷರು, ಕಾರ್ಯದರ್ಶಿ, ಎಲ್ಲಾ ಸಂಘಟನೆಗಳ ಪ್ರಮುಖರು ಹಾಗೂ ತಾಲೂಕಿನ ಸಮುದಾಯದ ಪ್ರಮುಖ ಮುಖಂಡರುಗಳ ಸಭೆ ಮಸೀದಿ ಸಭಾಂಗಣದಲ್ಲಿ ನಡೆಯಿತು. ಬೆಳ್ತಂಗಡಿ ತಾಲೂಕು ಕೆ.ಎಮ್.ಜೆ ಅದ್ಯಕ್ಷ ಎಸ್.ಎಮ್ ಕೋಯ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಬಹು ಝಮೀರ್ ಸಅದಿ ಸ್ವಾಗತಿಸಿದರು. ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ರಫಿ ಬೆಳ್ತಂಗಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ಸಭೆಗೆ ಸವಿಸ್ತಾರವಾಗಿ ತಿಳಿಸಿದರು.
ಏ. 12ರಂದು ನಡೆಯುವ ಕಾರ್ಯಕ್ರಮದಲ್ಲಿ ಧಾರ್ಮಿಕ ಅಗ್ರಗಣ್ಯ ನಾಯಕರುಗಳು, ಸಯ್ಯದ್ ಸಾದಾತುಗಳು, ಜಿಲ್ಲೆಯ ಹಾಗೂ ತಾಲೂಕಿನ ಉಲಮಾ, ಉಮರಾ ನಾಯಕರುಗಳು ಹಾಗೂ ಸಾಮಾಜಿಕ, ರಾಜಕೀಯ ಮುಖಂಡರುಗಳು ಭಾಗವಹಿಸುವ ಈ ಕಾರ್ಯಕ್ರಮವನ್ನು ಯಶಶ್ವಿಗೊಳಿಸಲು ಎಲ್ಲರಲ್ಲಿಯೂ ಮನವಿಯನ್ನು ಮಾಡಿದರು.
ಎಸ್. ಎಂ. ಕೋಯಾ ತಂಙಳ್ ರವರು ತಾಲೂಕಿನ ಎಲ್ಲಾ ಸಂಘಟನೆಗಳ ಹೆಚ್ಚಿನ ಚಟುವಟಿಕೆಗಳನ್ನು ಇದೇ ಮಸೀದಿಯನ್ನು ಕೇಂದ್ರವಾಗಿರಿಸಿ ನಾವು ನಡೆಸಿಕೊಂಡು ಬರುತ್ತಿದ್ದೇವೆ. ಇದರ ಆಡಳಿತ ಸಮಿತಿಯವರು ಹಾಗೂ ಜಮಾಅತ್ ನವರು ಎಲ್ಲರೊಂದಿಗೆ ಮುಕ್ತವಾಗಿ ಸಹಕರಿಸಿಕೊಂಡು ಬಂದಿರುತ್ತಾರೆ. ಆದುದರಿಂದ ಈ ಮಸೀದಿಯ ಎಲ್ಲಾ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಶ್ವಿಗಾಗಿ ಕರೆ ನೀಡಿದರು. ಗುರುವಾಯನಕೆರೆ ದರ್ಗಾ ಸಮಿತಿಯ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಬ್ಬೋನು ಮದ್ದಡ್ಕ, ಸಿರಾಜ್ ಸಖಾಫಿ, ಇಬ್ರಾಹಿಂ ಸಖಾಫಿ ಕಬಖ ತಮ್ಮ ಅಭಿಪ್ರಾಯವನ್ನು ಸಭೆಗೆ ಮಂಡಿಸಿ ಎಲ್ಲರ ಸಹಕಾರವನ್ನು ಕೋರಿದರು. ಪತ್ರಕರ್ತ ಅಶ್ರಫ್ ಆಲಿಕುಂಙ ಮುಂಡಾಜೆ ಹಾಗೂ ಎಮ್. ಬಿ. ಎಮ್ ಸ್ವಾದಿಕ್ ಮಾಸ್ಟರ್ ಮಲೆ ಬೆಟ್ಟುರವರು ಯಾವ ರೀತಿಯಿಂದ ಸಂಘಟಿಸಿದರೆ ಕಾರ್ಯಕ್ರಮ ವಿಜಯಿಯಾಗಬಹುದು ಎಂಬುದನ್ನು ಸಭೆಗೆ ತಿಳಿಸಿದರು.
ಸೇರಿದ ಎಲ್ಲರೂ ಈ ಕಾರ್ಯಕ್ರಮವನ್ನು ವಿಜಯಿಗೊಳಿಸುವ ಕುರಿತು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮಸೀದಿಯ ಗೌರವಾದ್ಯಕ್ಷರಾದ ಅಬ್ದುಲ್ ಲತೀಫ್ ಸಾಹೇಬ್, ನಾಸಿರ್ ಪಾಷ, ಬಿ. ಎಂ. ಖಲೀಲ್, ಮನ್ಸೂರ್, ತಾಲೂಕಿನ ಸುನ್ನೀ ಮುಖಂಡರುಗಳಾದ ಅಬ್ಬಾಸ್ ಬಟ್ಲಡ್ಕ, ಇಬ್ರಾಹಿಂ ಕಕ್ಕಿಂಜೆ, ಹಮೀದ್ ಮುಸ್ಲಿಯಾರ್, ಅಬೂಬಕ್ಕರ್ ಸಮಾಡೈನ್, ಬಿ. ಹಮೀದ್ ಮಿಲನ್, ಜ. ಕೆ. ಉಮ್ಮರ್, ವಝೀರ್ ಬಂಗಾಡಿ, ಖಾಸಿಂ ಬದ್ಯಾರ್, ಹಮೀದ್ ಎನ್. ಎಸ್., ಹಂಝ ಪಿ.ಯು., ಅಬ್ದುಲ್ ರಹ್ಮಾನ್, ಮಯ್ಯದ್ದಿ ಉಜಿರೆ, ಹನೀಫ್ ಮುಸ್ಲಿಯಾರ್ ನಿಡಿಗಲ್, ಉಮ್ಮರ್ ಫಾರೂಕ್ ಸಖಾಫಿ, ಇಸ್ಮಾಯಿಲ್ ನಾವೂರ, ಎನ್. ಎಸ್. ಅಬ್ದುಲ್ ರಹ್ಮಾನ್, ಅಬ್ದುಲ್ ಹಮೀದ್ ಟಿ., ಕೆ.ಹೆಚ್. ಖಾಲಿದ್ ಲಾಯಿಲ, ಅರ್ಷದ್, ಎಮ್. ಹೆಚ್. ಅಬ್ದುಲ್ಲ, ಶರೀಫ್ ಸಖಾಫಿ, ರಶೀದ್ ಮಡಂತ್ಯಾರ್, ಅಬ್ದುಲ್ ಸಮದ್, ಝುಬೈರ್ಸ ಆದಿ, ಇಸಾಕ್ ಹಾಗೂ ಇನ್ನಿತರ ಹಲವಾರು ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.