

ಮೂಡುಕೋಡಿ: ಕೊಪ್ಪದಬಾಕಿ ಮಾರು ಸತ್ಯ ಸಾರಮಾನಿ ದೈವಸ್ಥಾನದ ಗೋದಾಮು ನಿರ್ಮಾಣಕ್ಕೆ ಮೂಡುಕೋಡಿ ಗ್ರಾಮ ಪಂಚಾಯತ್ ಸದಸ್ಯರ ಅನುದಾನ ಮೀಸಲಿರಿಸಿದ್ದು, ಶಿಲಾನ್ಯಾಸ ಕಾರ್ಯಕ್ರಮ ಮಾ. 30ರಂದು ನೆರವೇರಿಸಲಾಯಿತು.
ಶಿಲಾನ್ಯಾಸದಲ್ಲಿ ಭಾಗವಹಿಸಿ ಮಾತನಾಡಿದ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ನಮ್ಮ ಭಾಗಕ್ಕೆ ಇರಿಸಿದ ಶೇಕಡಾ.25 ರ ಅನುದಾನವನ್ನು ಎಲ್ಲಾ ಪಂಚಾಯತ್ ಸದಸ್ಯರು ಜೊತೆಗೂಡಿ ವಿನಿಯೋಗ ಮಾಡಿದ ತೃಪ್ತಿ ಮೂಡುಕೋಡಿ ಸದಸ್ಯರಿಗೆ ಇದೆ ಎಂದರು. ಮುಂದಿನ ದಿನದಲ್ಲಿ ಮೂಡುಕೋಡಿಯಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ಹಾಗೂ ಆಟದ ಮೈದಾನ ನಿರ್ಮಿಸಲು ಎಲ್ಲಾ ಪಂಚಾಯತ್ ಸದಸ್ಯರು ಶ್ರಮಿಸುವುದಾಗಿ ಹೇಳಿದರು.

ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ಶುಭ ಕೋರಿದರು. ಈ ವೇಳೆ ಬಾಬು ಕಲ್ಯರಡ್ಡ, ಕೂಚ ಹೊಸ ಮನೆ, ಶೀನ ಹೊಸ ಮನೆ, ಗಜೇಂದ್ರ ಪಾಲಡ್ಕ, ಪ್ರಶಾಂತ್ ಹೊಸಮನೆ ಸುಧಾಕರ ಹೊಸ ಮನೆ, ಧರ್ಮರಾಜ್ ಕೊಪ್ಪದಬಾಕಿ ಮಾರು, ಸಿ.ಎ ಬ್ಯಾಂಕ್ ಸಿಬ್ಬಂದಿ ಚಂದ್ರಶೇಖರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಚಂದ್ರಾವತಿ, ಕಮಿಟಿಯ ಸದಸ್ಯರಾದ ಗೀತಾ, ವಿಮಲ, ಸೇರಿದಂತೆ ಹಲವರು ಉಪಸ್ಥಿತರಿದ್ದರು.