ಸ. ಪ್ರೌ. ಶಾಲೆ ಬೆಳ್ತಂಗಡಿಯಲ್ಲಿ ವ್ಯಕ್ತಿತ್ವ ವಿಕಸನದ ಸರಣಿ ಕಾರ್ಯಕ್ರಮ

0

ಬೆಳ್ತಂಗಡಿ : ಸರಕಾರಿ ಪ್ರೌಢ ಶಾಲೆ ಬೆಳ್ತಂಗಡಿಯ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ತರಬೇತಿಯ ಸರಣಿ ಕಾರ್ಯಕ್ರಮವು ಮಾ.19ರಿಂದ 28ರವರೆಗೆ ಶಾಲೆಯ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ನಡೆಯಿತು.

ಸರಣಿ ಕಾರ್ಯಕ್ರಮದ ಮೊದಲನೆಯ ದಿನದ ಅಂಗವಾಗಿ ಮಾ.19ರಂದು ವ್ಯಕ್ತಿತ್ವ ವಿಕಸನ ತರಬೇತಿ ನಡೆಸಲಾಯಿತು. ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಪ್ರಖ್ಯಾತ ರಂಗಕರ್ಮಿ ಶೀನ ನಾಡೋಳಿ ಶಿಬಿರವನ್ನು ನಡೆಸಿಕೊಟ್ಟರು.

2ನೇ ಕಾರ್ಯಕ್ರಮವಾಗಿ ವಿವಿಧ ಹವ್ಯಾಸಗಳ ಪರಿಚಯ ಕಾರ್ಯಕ್ರಮ ಮಾ. 20ರಂದು ನಡೆಯಿತು. ಶಾಲಾ ಪೋಷಕ ಮುರಳೀಧರ ನಡೆಸಿಕೊಟ್ಟರು. ತಾವು ಸಂಗ್ರಹಿಸಿದ ನಾಣ್ಯಗಳು, ವಿವಿಧ ಕರೆನ್ಸಿಗಳು, ಅಂಚೆ ಚೀಟಿಗಳು, ವಿವಿಧ ವಾಹನಗಳ ಮಾದರಿಗಳು, ಇನ್ನೀತರ ಅನೇಕ ಸಂಗ್ರಹಗಳನ್ನು ಹಾಗೂ ಜಾದೂ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿದರು. ಮತ್ತು ಅನೇಕ ಹವ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.

3ನೇ ಕಾರ್ಯಕ್ರಮವಾಗಿ ಕರಕುಶಲ ವಸ್ತುಗಳ ತಯಾರಿಕಾ ಕಾರ್ಯಾಗಾರ ಮಾ. 21ರಂದು ನಡೆಯಿತು. ಹಿರಿಯ ವಿದ್ಯಾರ್ಥಿಗಳಾದ ಸುರಕ್ಷಾ ಮತ್ತು ವಿನಯ್ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಚಿತ್ತಾಕರ್ಷಕವಾದ ಕಲಾಕೃತಿಗಳನ್ನು ರಚಿಸಿ ಅತ್ಯಂತ ಖುಷಿಪಟ್ಟರು.

4ನೇ ಕಾರ್ಯಕ್ರಮವಾಗಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಮಾ. 22ರಂದು ನಡೆಯಿತು. ಪ್ರಖ್ಯಾತ ಗಮಕಿಗಳಾದ ಪ್ರೊ. ಮಧೂರು ಮೋಹನ್ ಕಲ್ಲೂರಾಯ ಮತ್ತು ಮಧೂರು ವಿಷ್ಣುಪ್ರಸಾದ್ ಕಲ್ಲೂರಾಯರವರು ನಡೆಸಿಕೊಟ್ಟರು. ವಿದ್ಯಾರ್ಥಿಗಳು ತನ್ಮತೆಯಿಂದ ಗಮಕ ವಾಚನವನ್ನು ಆಲಿಸಿ ಗಮಕದಲ್ಲಿ ಅಭಿರುಚಿಯನ್ನು ಬೆಳಸಿಕೊಂಡರು.

5ನೇ ಕಾರ್ಯಕ್ರಮವಾಗಿ ಕಥೆ, ಕವನ, ನಾಟಕ ರಚನಾ ಕಾರ್ಯಾಗಾರ ಮಾ. 24ರಂದು ನಡೆಯಿತು. ಎಸ್. ಡಿ. ಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಕೃಷ್ಣ ಭಟ್ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ವಿವಿಧ ವಿಷಯಗಳ ಮೇಲೆ ಕಥೆ ಕವನಗಳನ್ನು ರಚಿಸಿ ನಾಟಕಗಳನ್ನು ಅಭಿನಯಿಸಿ ಶಿಬಿರದಲ್ಲಿ ಪಾಲ್ಗೊಂಡರು.

6ನೇ ಕಾರ್ಯಕ್ರಮವಾಗಿ ಚಿತ್ರಕಲಾ ಕಾರ್ಯಾಗಾರ ಮಾ. 25ರಂದು ನಡೆಯಿತು. ಚಿತ್ರಕಲಾ ಶಿಕ್ಷಕ ಮಹೇಶ್ ನಿಲಜಿ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಬಣ್ಣಗಾರಿಕೆಯಲ್ಲಿ ತೊಡಗಿಸಿಕೊಂಡರು.

7ನೇ ಕಾರ್ಯಕ್ರಮವಾಗಿ ಎಂಜಾಯ್ ಇಂಗ್ಲೀಷ್(Enjoy English) ಕಾರ್ಯಾಗಾರ ಮಾ. 26ರಂದು ನಡೆಯಿತು. ಆಂಗ್ಲ ಭಾಷಾ ಶಿಕ್ಷಕ ನಾರಾಯಣ ಗೌಡ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಆಂಗ್ಲ ಭಾಷಾ ಜ್ಞಾನವನ್ನು ಹೆಚ್ಚಿಸಿಕೊಂಡರು.

8ನೇ ಕಾರ್ಯಕ್ರಮವಾಗಿ ಗಣಿತದ ಕಾರ್ಯಾಗಾರ ಮಾ. 27ರಂದು ನಡೆಯಿತು. ಗಣಿತ ಶಿಕ್ಷಕ ಸುರೇಶ್ ಶೆಟ್ಟಿ ಬಿ. ನಡೆಸಿಕೊಟ್ಟರು. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಕಾರ್ಯಾಗಾರದಲ್ಲಿ ಭಾಗವಹಿಸಿ ಗಣಿತದ ಮಾದರಿಗಳನ್ನು ತಯಾರಿಸಿ ಸಂಭ್ರಮಿಸಿದರು.

ವ್ಯಕ್ತಿತ್ವ ವಿಕಸನದ ಸರಣಿ ಕಾರ್ಯಕ್ರಮದ ಕೊನೆಯ 9ನೇ ಕಾರ್ಯಕ್ರಮವಾಗಿ ಜಾನಪದ ಸಂಭ್ರಮ ಕಾರ್ಯಕ್ರಮ ಮಾರ್ಚ್ 28ರಂದು ನಡೆಯಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಸ್ಕೃತ, ದಕ್ಷಿಣ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಉದಯಕುಮಾರ್ ಲಾಯಿಲ ರವರು ನಡೆಸಿಕೊಟ್ಟರು. ಜೊತೆಗೆ ಸಂದೀಪ್ ಬಳಂಜ ಅವರಿಗೆ ಸಹಕರಿಸಿದರು. ವಿದ್ಯಾರ್ಥಿಗಳು ಜನಪದ ಹಾಡು, ನೃತ್ಯ, ಆಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ನಿರಂತರವಾಗಿ 9 ದಿನಗಳ ಕಾಲ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವು ಮುಖ್ಯ ಶಿಕ್ಷಕಿ ಪೂರ್ಣಿಮ ಮತ್ತು ಎಲ್ಲಾ ಸಹ ಶಿಕ್ಷಕರ ನೆರವಿನಿಂದ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

ಗಣಿತ ಶಿಕ್ಷಕ ಸುರೇಶ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ಶುಭನುಡಿದರು. ಕನ್ನಡ ಭಾಷಾ ಶಿಕ್ಷಕಿ ಪೂರ್ಣಿಮಾ ಕೆ. ಕೆ. ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here