ಬೆಳ್ತಂಗಡಿಯಲ್ಲಿ ಮಾದಕ ದ್ರವ್ಯ ವಿರುದ್ಧ ಜಾಥಾ

0

ಬೆಳ್ತಂಗಡಿ: ನಗರದಲ್ಲಿ ಮಾದಕ ವ್ಯಸನಿಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮಾದಕ ದ್ರವ್ಯದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಲಯನ್ಸ್ ಕ್ಲಬ್ ಮತ್ತು ಬೆಳ್ತಂಗಡಿ ಪೊಲೀಸರ ನೇತೃತ್ವದಲ್ಲಿ ಮೆಗಾ ಆಂಟಿ ಡ್ರಗ್ ವಾಕಾಥಾನ್ ನಡೆಯಿತು.

ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ನಾನಾ ಸಂಘ ಸಂಸ್ಥೆಗಳು ಜೊತೆಗೂಡಿ ಸಂತೆಕಟ್ಟೆಯ ಎಸ್ ಡಿ ಎಂ ಕಲಾಭವನದವರೆಗೆ ಮೆರವಣಿಗೆ ಮೂಲಕ ಮಾದಕ ದ್ರವ್ಯ ಕುರಿತು ಜಾಗೃತಿ ಮೂಡಿಸಲಾಯಿತು.

ಜಾಥಾ ನಂತರದಲ್ಲಿ ಎಸ್. ಡಿ. ಎಂ ಕಲಾ ಭವನ ದಲ್ಲಿ ಸಭಾ ಕಾರ್ಯಕ್ರಮ ನೆರವೇರಿದ್ದು, ಜಿಲ್ಲಾ ವರಿಷ್ಠಾಧಿಕಾರಿ ಯತೀಶ್, ಯುವಜನರು ಮಾದಕ ವ್ಯಸನಿಗಳಾಗಿ ಅವರ ಜೀವನವನ್ನು ಮಾತ್ರ ಹಾಳು ಮಾಡುವುದಲ್ಲದೆ, ಸುತ್ತಮುತ್ತಲಿನವರನ್ನು ಕೂಡ ದಾರಿ ತಪ್ಪಿಸುತ್ತಾರೆ. ಹಾಗಾಗಿ ಯುವ ರು ದಯವಿಟ್ಡು ಇಂತಹ ದುಶ್ಟಟಗಳಿಗೆ ಬಲಿಯಾಗಬೇಡಿ, ಅದರ ಬದಲು ಸದಭಿರುಚಿಗಳನ್ನು ರೂಢಿಸಿಕೊಳ್ಳಿ ಎಂದು ವಿನಂತಿಸಿಕೊಂಡರು.

ಸಭೆಯಲ್ಲಿ ಬಂಟ್ವಾಳ ಡಿವೈ ಎಸ್ ಪಿ ವಿಜಯ್ ಪ್ರಸಾದ್, ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಬಿ ಜಿ ಸುಬ್ಬುಪುರ್ ಮಠ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ವಲಯನ್ಸ್ ಕ್ಲಬ್ ಅಧ್ಯಕ್ಷ ದೇವ್‌ ದಾಸ್ ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here