

ಬೆಳ್ತಂಗಡಿ: ಸುಮಾರು 15 ವರ್ಷಗಳ ಬಳಿಕ ಟಿ. ಬಿ. ಕ್ರಾಸ್ ನಿಂದ ಕುತ್ರೋಟ್ಟು ರಸ್ತೆಗೆ ಡಾಂಬರೀಕರಣ, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಿದ ರಕ್ಷಿತ್ ಶಿವರಾಮ್ ಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು. ರಾಜ್ಯ ಸರಕಾರದ ಅನುದಾನದಿಂದ ಲಾಯಿಲ ಗ್ರಾಮದ ಟಿ. ಬಿ. ಕ್ರಾಸ್ ನಿಂದ ಕುತ್ರೋಟ್ಟುವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಪೂರ್ಣ ಹಂತದಲ್ಲಿರುವ ಕಾಮಗಾರಿಯನ್ನು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ ರವರು ಬಂದು ವೀಕ್ಷಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಯು. ಕೆ. ಹನೀಫ್, ಯೂಥ್ ಕಾಂಗ್ರೆಸ್ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿಯಾದ ಅಬ್ದುಲ್ ರಹ್ಮಾನ್, ಅಕ್ಬರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಕುಂಞಿ ಕತಾರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶರೀಫ್ ಕುಂಟಿನಿ, ಉಮರ್ ಕುಂಞಿ ನಾಡ್ಜೆ, ಉಸ್ಮಾನ್, ಉಬೈದ್, ಇಕ್ಬಾಲ್, ಝಮೀರ್, ಸಹದ್ ಅಂಗಡಿ,
ಉಮೇಶ್ ಪೂಜಾರಿ, ಸುಂದರ್ ಅಂಗಡಿ, ಕೇಶವ್ ಕುಲಾಲ್, ಹಂಝ ಎಮ್. ಹೆಚ್., ಅಬೂಬಕ್ಕರ್, ಝಕರಿಯ್ಯ ಜೀಪ್, ಮಯ್ಯದಿ ಅಡಿಗೆ, ಹಸೈನಾರ್ ಅತ್ತಾಜೆ, ಫಾರುಕ್, ಅಶ್ರಫ್ ಅತ್ತಾಜೆ, ಚಾರ್ಲಿ ಹಾಗು ಇನ್ನಿತರ ಕಾರ್ಯಕರ್ತರು ಹಾಗೂ ಊರಿನವರು ಉಪಸ್ಥಿತರಿದ್ದರು.