ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ ಆದೇಶ – ಎ.1ರಿಂದಲೇ ಪರಿಷ್ಕೃತ ದರ ಜಾರಿ

0

ಬೆಳ್ತಂಗಡಿ: ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್‌ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿ KERC’ ಆದೇಶ ಹೊರಡಿಸಿದೆ.

ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ವ್ ಎಸ್ಕಾಮ್ ಸಿಬ್ಬಂದಿ ಪಿಂಚಣಿ ಗ್ರಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆ.ಇ.ಆ‌ರ್.ಸಿ. ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ.

ಏ. 1ರಿಂದಲೇ ಕೆ.ಇ.ಆರ್.ಸಿ ಹೊಸ ದರ ಜಾರಿಗೆ ಬರಲಿದೆ.
ಯೂನಿಟ್‌ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆ.ಇ.ಆರ್‌.ಸಿ ಪ್ರಸ್ತಾವನೆ ಸಲ್ಲಿಸಿದ್ದವು.

ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು (ಮಾರ್ಚ್ 27) ಕೆ.ಇ.ಆರ್‌.ಸಿ ಅಧಿಕೃತವಾಗಿ ಪ್ರತಿ ಯೂನಿಟ್ ವಿದ್ಯುತ್‌ಗೆ 36 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏ. 1ರಿಂದಲೇ ಹೊಸ ದರ ಜಾರಿಯಾಗಲಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ.

LEAVE A REPLY

Please enter your comment!
Please enter your name here