ಗುರುವಾಯನಕೆರೆ ವೇದವ್ಯಾಸ ಶಿಶು ಮಂದಿರದಿಂದ ಅರ್ಥಪೂರ್ಣ ಮಾತೃ ಪೂಜನಾ ಕಾರ್ಯಕ್ರಮ

0

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನ ಶ್ರೀ ವೇದ ವ್ಯಾಸ ಶಿಶುಮಂದಿರದ ಹಾಗೂ ಬಾಲಗೋಕುಲದ ಮಕ್ಕಳಿಗೆ ಮಾತೃ ಪೂಜನಾ ಕಾರ್ಯಕ್ರಮ ಹಾಗೂ ಸಾಮೂಹಿಕ ಹುಟ್ಟುಹಬ್ಬ ಆಚರಣೆಯನ್ನು ಹವ್ಯಕ ಮನೆಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ತ್ರಿವಿಕ್ರಮ ಹೆಬ್ಬಾರ್ ಉದ್ಘಾಟಿಸಿ,”ಶಿಶುಮಂದಿರ ಅರ್ಥಪೂರ್ಣ ಕಾರ್ಯಕ್ರಮವನ್ನು ಮಾಡಿದೆ, ಇಂತಹ ಸಂಸ್ಕಾರವನ್ನು ನಾವು ಬೇರೆಲ್ಲಿಯೂ ನೋಡಲು ಸಾಧ್ಯವಿಲ್ಲ, ಇಲ್ಲಿ ಕಲಿತ ಮಕ್ಕಳು ನಿಜಕ್ಕೂ ಉತ್ತಮ ಪ್ರಜೆಗಳಾಗುತ್ತಾರೆ ಎಂದು ಶ್ಲಾಘನೆಯ ಮಾತುಗಳನ್ನಾಡಿದರು. ಯುವ ಚಿಂತಕ, ವಾಗ್ಮಿ ಸಂಕೇತ್ ಶೆಟ್ಟಿ ಮೂಡೈಮಾರ್ ಮಾತನಾಡಿ, ”ಶಿಶುಮಂದಿರದ ಇಂತಹ ಕಾರ್ಯಕ್ರಮಗರಣ ಹಿಂದೂ ಸಂಸ್ಕೃತಿಯನ್ನು, ಸನಾತನ ಧರ್ಮವನ್ನು ಉಳಿಸುತ್ತದೆ ಎಂದು ಹೇಳಿ ಸನಾತನ ಧರ್ಮದ ಮಹತ್ವ ಹಾಗೂ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು, ತಾಯಿಯ ಜವಬ್ದಾರಿ ಏನು ಅನ್ನುವುದನ್ನು ಹೇಳಿದರು.

ಶಿಶುಮಂದಿರ ಹಾಗೂ ಬಾಲಗೋಕುಲದ ಪುಟಾಣಿ ಮಕ್ಕಳು ಬಾರತೀಯ ನಾರಿಯರಂತೆ ಬಂದ ತಮ್ಮ ತಾಯಿ ಹಾಗೂ ತಂದೆಯ ಪಾದವನ್ನು ತೊಳೆದು ನಂತರ ಪಾದ ಪೂಜೆ ಮಾಡಿದರು. ಆ ನಂತರ ಹೆತ್ತವರು ತಮ್ಮ ಮಕ್ಕಳಿಗೂ ಆರತಿ ಮಾಡಿ ಚಾಕಲೇಟ್ ಕೊಟ್ಟು ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಿದರು. ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಶಿಶುಮಂದಿರದಿಂದ ಮುಂದಿನ ಶಿಕ್ಷಣಕ್ಕಾಗಿ ಹೋಗುವ ಪುಟಾಣಿ ಮಕ್ಕಳಿಗೆ ಪ್ರಮಾಣಪತ್ರ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ವೇದವ್ಯಾಸ ಶಿಶುಮಮದಿರ ಆಡಳಿತ ಮಂಡಳಿ ಅಧ್ಯಕ್ಷೆ ಇಂದುಮತಿ, ಕಾರ್ಯದರ್ಶಿ ಸುಕೇಶಿನಿ ಶೆಟ್ಟಿ, ಕೋಶಾಧಿಕಾರಿ ಪ್ರಿಯದರ್ಶಿನಿ ಸುವರ್ಣ, ಮಾತೃ ಮಂಡಳಿ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ. ಕಮಿಟಿ ಸದಸ್ಯೆ ಪ್ರೇಮಲತಾ, ಮಾತಾಜಿಯವರಾದ ಅಶ್ವಿನಿ ಹಾಗೂ ಜಯಶ್ರೀ ಉಪಸ್ಥಿತರಿದ್ದರು. ವಿಜಯ ಕುಲಾಲ್ ನಾವೂರು ಹಾಗೂ ಸುಧೀರ್ ಕುಲಾಲ್ ಪಕ್ಕಿದಕಲ ಕಾರ್ಯಕ್ರಮದ ಕುರಿತು ಅನುಭವ ಹಂಚಿಕೊಂಡರು.

ಕಮಿಟಿ ಸದಸ್ಯೆ ಮಂಗಳ ರತ್ನಾಕರ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿ, ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here