

ಗರ್ಡಾಡಿ: ನಂದಿ ಫ್ರೆಂಡ್ಸ್ ನಂದಿಬೆಟ್ಟ ಇವರ ವತಿಯಿಂದ ದಿ! ಶೈಲೇಶ್ ಶೆಟ್ಟಿಯವರ ಸವಿನೆನಪಿಗಾಗಿ ಗರ್ಡಾಡಿ ನಂದಿಬೆಟ್ಟದಲ್ಲಿ ಊರ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಾಣಗೊಂಡ ಸಾರ್ವಜನಿಕ ಬಸ್ ತಂಗುದಾಣವನ್ನು ಶಾಸಕ ಹರೀಶ್ ಪೂಂಜರವರು ದೀಪ ಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಸುವರ್ಣ, ಉಪಾಧ್ಯಕ್ಷೆ ವಸಂತಿ ಪಿ., ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರಿ ಸಂಘ ಪಡಂಗಡಿ ಇದರ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಮದಿರಾ ಬಾರ್ & ರೆಸ್ಟೋರೆಂಟ್ ಗರ್ಡಾಡಿ ಮಾಲೀಕರು ಹರೀಶ್ ಶೆಟ್ಟಿ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೋಪೆಸರ್ ರಘುನಂದನ್ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ, ಶುಭ ದಿನಕರ್, ನಂದಿಕೇಶ್ವರ ದೇವಸ್ಥಾನದ ನಿಕಟಪೂರ್ವ ಮೊಕ್ತೇಸರ, ಗ್ರಾಮ ಪಂಚಾಯತ್ ಸದಸ್ಯ ಯೋಗಿಶ್ ಭಟ್, ನಂದಿಕೇಶ್ವರ ದೇವಸ್ಥಾನದ ಆಡಲಿತ ಮೊಕ್ತೇಸರ ಹರೀಶ್ ಕೋಟ್ಯಾನ್, ಸುಜಯ್ ಶೆಟ್ಟಿ ಸಿ.ಇ. ಒ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಗುರುವಾಯನಕೆರೆ ಹಾಗೂ ಗ್ರಾಮಸ್ಥರು ಭಾಗವಹಿಸಿ ಶುಭ ಹಾರೈಸಿದರು.