

ವೇಣೂರು: ಮರೋಡಿ ಗ್ರಾಮದ ಮರೋಡಿ 5ಸೆನ್ಸ್ ನ ಕೋಳಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾಗ ಪೋಲಿಸ್ ದಾಳಿ ಮಾಡಿರುವ ಘಟನೆ ಮಾ. 23ರಂದು ರಾತ್ರಿ ನಡೆದಿದೆ.
ಅಂಗಡಿ ಮಾಲೀಕ ರಮೇಶ್ ಎಂಬಾತ ಮದ್ಯದ ಅಂಗಡಿಯಿಂದ ಮದ್ಯ ತಂದು ಹೆಚ್ಚಿನ ಬೆಲೆಗೆ ಮಾರಟ ಮಾಡುವುದನ್ನು ಸ್ಥಳೀಯ ಬಿಟ್ ಪೋಲಿಸರ ಮಾಹಿತಿ ಮೇರೆಗೆ ಪೊ.ಎಸ್.ಐ ಆನಂದ್ ಇವರ ನೇತ್ರತ್ವದಲ್ಲಿ ದಾಳಿ ನಡೆದಿದೆ.
ಸರಿಸುಮಾರು 1600 ಮೊತ್ತದ 4ಲೀ ಮದ್ಯ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.