ಮಾ. 22: ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ – ಪೂಂಜಶ್ರೀ ಟ್ರೋಫಿ 2025

0

ಬೆಳ್ತಂಗಡಿ: ಪೂಂಜಶ್ರೀ ಪ್ರಿಂಟರ್ಸ್ ರವರು ಆಯೋಜಿಸುವ ಬೆಳ್ತಂಗಡಿ ತಾಲೂಕು ಮಟ್ಟದ 16 ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟವು ಮಾ. 22ರಂದು ಕೆ.ಇ.ಬಿ ರಸ್ತೆಯಲ್ಲಿರುವ ಕೆಲ್ಲಗುತ್ತು ಮೈದಾನದಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ.

ಪಂದ್ಯಾಕೂಟದಲ್ಲಿ ನಗದು ಮತ್ತು ಪೂಂಜಶ್ರೀ ಟ್ರೋಫಿ ಹಾಗೂ ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಪಾಸರ್, ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪಂದ್ಯಾಕೂಟದ ಆಯೋಜಕ, ಪೂಂಜಶ್ರೀ ಪ್ರಿಂಟರ್ಸ್ ಮಾಲಕ ಅರ್ಪಣ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here