



ಗೇರುಕಟ್ಟೆ: ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯ ಗೇರುಕಟ್ಟೆ ಸಮೀಪದ ಜಾರಿಗೆಬೈಲು ಎಂಬಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಸವಾರ ಸಾವನ್ನಪ್ಪಿದ ಘಟನೆ ಮಾ.20ರಂದು ರಾತ್ರಿ ನಡೆದಿದೆ.

ಬೆಳಾಲು ಪೆರಿಯಡ್ಕ ನಿವಾಸಿ ಪ್ರವೀಣ ಎಸ್. ಎಲ್.(25.ವ) ಮೃತಪಟ್ಟವರು ಎಂದು ಮಾಹಿತಿ ಲಭ್ಯವಾಗಿದೆ. ತಕ್ಷಣ ಗಾಯಾಳು ಸವಾರ ಪ್ರವೀಣ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.