
ಉಜಿರೆ: ಮಾಚಾರು ಮೈದಾನದ ಬಳಿ ಮುಸ್ಲಿಂ ಯುವಕರ ಗುಂಪುಗಳ ನಡುವೆ ಪರಸ್ಪರ ಹೊಡೆದಾಟ ನಡೆದಿರುವ ಘಟನೆ ವರದಿಯಾಗಿದೆ. ಪರಸ್ಪರ ಸಂಬಂಧಿಕರಾಗಿರುವ ಯುವಕರೊಳಗೆ ಹಣದ ವಿಚಾರದಲ್ಲಿ ಹೊಡೆದಾಟ ನಡೆದಿದೆ. ನಂತರ ಮೂವರು ಹಮೀದ್ ಎಂಬವರ ಅಟೋ ರಿಕ್ಷಾದಲ್ಲಿ ಬಂದು ಉಜಿರೆಯ ನಿನ್ನಿಕಲ್ಲು ತಲುಪುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಮಾಚಾರುನ ಯುವಕರು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಪರಸ್ಪರ ಹೊಡೆದಾಟ ನಡೆದು ರಿಕ್ಷಾ ಮತ್ತು ದ್ವಿಚಕ್ರ ವಾಹನ ಸಂಪೂರ್ಣ ಹಾನಿಯಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.