ಬೆಳ್ತಂಗಡಿ: ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣರಾಗಿದ್ದ ಬೆಳ್ತಂಗಡಿಯ ಹೋಟೆಲ್ ಸಮತಾ ಖ್ಯಾತಿಯ ವಿಠ್ಠಲ್ ಭಟ್ (84ವ)ಅವರು ಮಾ.19ರಂದು ರಾತ್ರಿ ನಿಧನರಾದರು.
ಮೃತರು ಪುತ್ರ ಗಣೇಶ್ ಭಟ್, ಪುತ್ರಿಯರಾದ ಜ್ಯೋತಿ ಶೆಣೈ ಮತ್ತು ಸಂಧ್ಯಾ ಪ್ರಭು ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮಾ.20ರಂದು ಬೆಳಿಗ್ಗೆ 8 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.