ಉಜಿರೆ: ನಂದಿ ರಥಯಾತ್ರೆ ಮಾ.18ರಂದು ಸಂಜೆ ಉಜಿರೆಗೆ ಆಗಮಿಸಿದಾಗ ಬೆಳಾಲು ಕ್ರಾಸ್ ಬಳಿ ಭವ್ಯ ಸ್ವಾಗತ ಕೋರಲಾಯಿತು.

ಹಿಂದೂ ಮುಖಂಡರು ಹಾಗೂ ಆರ್. ಎಸ್. ಎಸ್ ಮುಖಂಡರು, ಉದ್ಯಮಿಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ನಂದಿ ರಥಕ್ಕೆ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು.

ನಂತರ ಚೆಂಡೆ, ಕುಣಿತ ಭಜನೆ ಮೂಲಕ ಭವ್ಯವಾದ ಮೆರವಣಿಗೆಯೊಂದಿಗೆ ಉಜಿರೆಯಿಂದ ಸಾಗಿ ಜನಾರ್ದನ ಸ್ವಾಮಿ ದೇವಸ್ಥಾನದ ಶಾರದ ಮಂಟಪದಲ್ಲಿ ದಾರ್ಮಿಕ ಕಾರ್ಯಕ್ರಮವು ನಡೆಯಿತು.