ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಮುಖ್ಯೋಪಾಧ್ಯಾಯರ ಸಂಘ ಬೆಂಗಳೂರು ಇದರ ತಾಲೂಕು ಘಟಕದ ವತಿಯಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಮಾ. 15ರಂದು ಬೆಳ್ತಂಗಡಿ ತಾಲೂಕು ಸರಕಾರಿ ನೌಕರರ ಭವನದಲ್ಲಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ ಉದ್ಘಾಟಿಸಿ ಮಾತನಾಡುತ್ತ ಮುಖ್ಯ ಶಿಕ್ಷಕರು ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪರಿಪೂರ್ಣರಾದಾಗ ಆಡಳಿತ ವ್ಯವಸ್ಥೆಯು ಗಟ್ಟಿಗೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಇಂದಿನ ಕಾರ್ಯಾಗಾರವು ಎಲ್ಲ ಮುಖ್ಯ ಶಿಕ್ಷಕರಿಗೆ ತಮ್ಮ ಅರಿವಿನ ಕಣಜ ತುಂಬಿಕೊಳ್ಳಲು ಪ್ರೇರಣೆಯಾಗಲಿ ಎಂದರು
ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಬಸವ ಲಿಂಗಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ ಕೃಷ್ಣ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗ ರಾಜು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಭಾಗವಹಿಸಿದರು.
ವೇದಿಕೆಯಲ್ಲಿ ಬಿ. ಆರ್. ಸಿ ಮೋಹನ್ ಕುಮಾರ್ ಇ. ಸಿ. ಒ ಸಿದ್ಧಲಿಂಗಸ್ವಾಮಿ, ಚೇತನಾಕ್ಷೀ, ತಾಲೂಕು ಘಟಕದ ಗೌರವಾಧ್ಯಕ ಜಗನ್ನಾಥ ಎಂ. ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿ. ಆರ್. ಪಿ ರಾಜೇಶ್, ಬಿ. ಆರ್. ಸಿ ಸಿಬಂದಿಗಳಾದ ರಾಜಶ್ರೀ ಮತ್ತು ದಾಕ್ಷಾಯಿಣಿ ಸಹಕರಿಸಿದರು. ನಿವೃತ್ತ ಮುಖ್ಯ ಗುರುಗಳಾದ ಕೃಷ್ಣಪ್ಪ ನಾಯ್ಕ, ಫೆಲ್ಟಿ ಮೋರಸ್, ರತ್ನಾರವರನ್ನು ಸನ್ಮಾನಿಸಲಾಯಿತು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸ್ವಾಗತಿಸಿ, ಪ್ರಸ್ತಾವನೆಗೈದರು. ಸಂಘದ ಪ್ರತಿನಿಧಿಗಳಾದ ಪುಷ್ಪಾ, ಚಂದ್ರಾವತಿ, ಸುಫಲಾ, ಮಂಜುಳಾ ಜೆ. ಟಿ. ಪ್ರಾರ್ಥಿಸಿದರು. ಬಳಿರಾಮ ಲಮಾಣಿ ಉಮಾ ಡಿ. ಗೌಡ ಹಾಗೂ ಉಮೇಶ್ ನಾಯ್ಕ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು. ಭಾಸ್ಕರ್ ಹೆಚ್ ಮತ್ತು ಸುಫಲಾ ಕಾರ್ಯಕ್ರಮ ನಿರೂಪಿಸಿದರು. ಶಿವಸ್ವಾಮಿ ಎ. ಎಸ್. ಧನ್ಯವಾದವಿತ್ತರು.