ವೇಣೂರು ಶ್ರೀ ಬಾಹುಬಲಿ ಬೆಟ್ಟದ ವಾಷಿ೯ಕ ರಥಯಾತ್ರಾ ಮಹೋತ್ಸವ ಸಂಪನ್ನ- ರಥೋತ್ಸವಗಳು ಧಾಮಿ೯ಕ ಪ್ರಜ್ಞೆಯನ್ನು ಬೆಳೆಸುತ್ತದೆ: ಭಟ್ಟಾರಕ ಶ್ರೀಗಳು

0

ವೇಣೂರು: ರಥೋತ್ಸವದಂತಹ ಪುಣ್ಯ ಕಾಯ೯ಗಳಲ್ಲಿ ನಿಷ್ಠೆಯಿಂದ ಶೃದ್ಧಾ ಭಕ್ತಿಯಿಂದ ಪಾಲ್ಗೊಂಡಲ್ಲಿ ಜಿನೇಂದ್ರ ಭಗವಂತರ ಅನುಗ್ರಹ ನಮಗೆ ಪ್ರಾಪ್ತವಾಗುತ್ತದೆ. ಸಮ್ಯಕ್‌ ಜ್ಞಾನ, ಸಮ್ಯಕ್‌ ದಶ೯ನ ಮತ್ತು ಸಮ್ಯಕ್‌ ಚಾರಿತ್ಯ್ರದ ಪ್ರತೀಕವೇ ರಥೋತ್ಸವ ಇದರಿಂದ ಶ್ರಾವಕ-ಶ್ರಾವಕಿಯರಾದ ನಮ್ಮಲ್ಲಿ ಧಾಮಿ೯ಕ ಪ್ರಜ್ಞೆಯು ಜಾಗೃತವಾಗುತ್ತದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಪೀಠಾಧಿಪತಿ “ಭಾರತಭೂಷಣ” ಡಾ. ಸ್ವಸ್ತಿಶ್ರೀ ಚಾರುಕೀತಿ೯ ಭಟ್ಟಾರಕ ಪಂಡಿತಾಚಾಯ೯ವಯ೯ ಮಹಾಸ್ವಾಮೀಜಿಯವರು ನುಡಿದರು. ಅವರು ವೇಣೂರು ಬಾಹುಬಲಿ ಬೆಟ್ಟದ ವಾಷಿ೯ಕ ರಥಾಯಾತ್ರ ಮಹೋತ್ಸವದ ಧಾಮಿ೯ಕ ಸಭಾಕಾಯ೯ಕ್ರಮದಲ್ಲಿ ಆಶೀವ೯ಚನವಿತ್ತರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಉಪಾಧ್ಯಕ್ಷ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪದ್ಮಪ್ರಸಾದ್‌ ಅಜಿಲರು ವಹಿಸಿ ಮಾತನಾಡಿ ಈ ವಷ೯ದಿಂದ ವೇಣೂರು ಯಾತ್ರಿನಿವಾಸದಲ್ಲಿ “ಶ್ರುತ ಭಂಡಾರ” ಸ್ವಾಧ್ಯಾಯ ಕೇಂದ್ರ ಪ್ರಾರಂಭಿಸಿದ್ದು, ಶ್ರಾವಕ-ಶ್ರಾವಕಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.

ಮುಖ್ಯ ಅತಿಥಿಗಳಾದ ಕನಾ೯ಟಕ ಸರಕಾರದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್‌ ಮೂಡುಬಿದಿರೆ ಇವರು ಶ್ರುತ ಭಂಡಾರ ಸ್ವಾಧ್ಯಾಯ ಕೇಂದ್ರ ವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಳೆದ ಬಾರಿ ಮಹಾಮಸ್ತಕಾಭಿಷೇಕದ ಕಾಯ೯ಕ್ರಮಗಳು ಅತ್ಯಂತ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ವೇಣೂರು ತೀಥ೯ಕ್ಷೇತ್ರದ ಮೂಲಭೂತ ಸೌಕಯ೯ಗಳ ಅಭಿವೃಧಿಗೆ ಹಾಗೂ ಯಾತ್ರಾಥಿ೯ಗಳ ಅನುಕೂಲಕ್ಕೆ ಇನ್ನಷ್ಟು ಅಭಿವೃದ್ಧಿ ಕಾಯ೯ಗಳಿಗೆ ಸರಕಾರದ ಅನುದಾನಕ್ಕೆ ಪ್ರಯತ್ನಿಸಲಾಗುವುದು ಎಂದು ಅಭಯಚಂದ್ರ ಜೈನ್‌ ತಿಳಿಸಿದರು.

ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ: ರಥೋತ್ಸವದ ಧಾಮಿ೯ಕ ಸಭೆಯಲ್ಲಿ 90 ವಷ೯ ದಾಟಿದ ಹಿರಿಯ ಶ್ರಾವಕಿ ಗುಣವತಿ ಪಿ.ಎ ಆಳ್ವ ಪಂಜಾಲಬೈಲು ಹಿರಿಯ ಶ್ರಾವಕ ಜಗತ್ಪಾಲ ಮುದ್ಯ ಕತ್ತೋಡಿ ಹಾಗೂ ಹಿರಿಯ ಶ್ರಾವಕಿ ಗುಣವತಿ ಅಮ್ಮ ಬರಮೇಲು ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಇತ್ತೀಚೆಗೆ ರತ್ನಾಕರ ವಣಿ೯ ಪ್ರಶಸ್ತಿ ಪಡೆದ ಮಾಂಡೋವಿ ಮೋಟಾರ್ಸ್‌ನ ಚೀಫ್‌ ಜನರಲ್‌ ಮ್ಯಾನೇಜರ್‌ ನೇರೆಂಕಿ ಪಾಶ್ವ೯ನಾಥ ಜೈನ್‌ ಸಿ.ಎ ಪರೀಕ್ಷೆಯಲ್ಲಿ ಉತ್ತೀಣ೯ರಾದ ದ್ವಿಶಾನ್‌ ಜೈನ್‌ ಕಂಚ ಇವರನ್ನು ಗೌರವಿಸಲಾಯಿತು.

2024ರ ಎಸ್.ಎಸ್. ಎಲ್ : ಸಿ. ಹಾಗೂ ಪಿಯುಸಿಯ ಪ್ರತಿಭಾವಂತ ಜೈನ ವಿದ್ಯಾಥಿ೯ಗಳಿಗೆ ವಿದ್ಯಾಥಿ೯ವೇತನ ವಿತರಿಸಲಾಯಿತು. ವಿದ್ಯಾಥಿ೯ವೇತನ ಹಾಗೂ ಪ್ರತಿಭಾ ಪುರಸ್ಕಾರದ ಪ್ರಾಯೋಜಕರುಗಳಾದ ದಿವಂಗತ ಅಂತಪ್ಪ ಆಳ್ವರು ಬಡಕೋಡಿ ದಿ|ಆದಿರಾಜ ಶೆಟ್ಟಿ, ಮಾರಗುತ್ತು ದಿ|ವಿಜಯರಾಜ ಅಧಿಕಾರಿ ಕುಟುಂಬಸ್ಥರನ್ನು ಹಾಗೂ ಅಕ್ಷಯಕುಮಾರ್‌ ಕಂಬಳಿ ಉಜಿರೆ , ಮೂಡಬಿದಿರೆಯ ಎಂ.ವಿ ಶೆಟ್ಟಿ ಇವರನ್ನು ಗೌರವಿಸಲಾಯಿತು.

ಚಾವಿ೯ ಪ್ರಾಥ೯ಸಿ, ವೇಣೂರು ಶ್ರೀ ದಿಗಂಬರ ಜೈನ ತೀಥ೯ಕ್ಷೇತ್ರ ಸಮಿತಿಯ ಕಾಯ೯ದಶಿ೯ ವಿ.ಪ್ರವೀಣ್‌ ಕುಮಾರ್‌ ಇಂದ್ರ ಸ್ವಾಗತಿಸಿದರು. ಸಮಿತಿ ಕೋಶಾಧಿಕಾರಿ ಪಿ. ಜಯರಾಜ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿ ಜೊತೆ ಕಾಯ೯ದಶಿ೯ ಮಹಾವೀರ್‌ ಜೈನ್‌ ಮೂಡುಕೋಡಿ ಕಾಯ೯ಕ್ರಮ ನಿರೂಪಿಸಿ, ವಂದಿಸಿದರು. ವೇಣೂರು, ಮೂಡುಬಿದಿರೆ, ಪರುಷಗುಡ್ಡೆ ಜಿನಭಜನಾ ತಂಡಗಳಿಂದ ಜಿನಭಜನೆ ಕಾಯ೯ಕ್ರಮ ನಡೆಯಿತು. ಬಳಿಕ ಉತ್ಸವ ಶ್ರೀ ಕೊಡಮಣಿತ್ತಾಯ ದೈವದ ನೇಮ, ಬಾಹುಬಲಿ ಸ್ವಾಮಿಗೆ 24 ಕಲಶಗಳಿಂದ ಪಾದಾಭಿಷೇಕ ಧ್ವಜಾವರೋಹಣದೊಂದಿಗೆ ರಥಾಯಾತ್ರ ಮಹೋತ್ಸವ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here