ಬೆಳ್ತಂಗಡಿ: ಮಂಗಳೂರು ವಿಶ್ವವಿದ್ಯಾನಿಲಯ ಫೆ. 2025ರಲ್ಲಿ ನಡೆಸಿದ ದ್ವಿತೀಯ ಹಾಗೂ ಚತುರ್ಥ ಸೆಮಿಸ್ಟರ್ ಬಿ.ಎಡ್. ಪರೀಕ್ಷೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ ಬಂದಿರುತ್ತದೆ.
ದ್ವಿತೀಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಒಟ್ಟು 49 ವಿದ್ಯಾರ್ಥಿಗಳಲ್ಲಿ 47 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 2 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಅಖಿಲಾ ಎಂ. ಪಿ. 574 (95.67%) ಪಡೆದು ಪ್ರಥಮ ಸ್ಥಾನವನ್ನು, ವಿಸ್ಮಿತಾ 555 ( 92.50%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಹಾಗೂ ದಿವ್ಯಾ ಕೆ. ಎಸ್. 548 ( 91.33%) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಹಾಗೆಯೇ ಚತುರ್ಥ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ ಒಟ್ಟು 50 ವಿದ್ಯಾರ್ಥಿಗಳಲ್ಲಿ ಎಲ್ಲಾ 50 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ವಿನಿತ್ ಲ್ಯಾನ್ಸನ್ ಸಿಕ್ವೇರಾ 581 ( 96.83%) ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು, ರಶ್ಮಿ ಕೆ 578 ( 96.33%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು, ಭಾರ್ಗವಿ ಹಾಗೂ ವಿಜಯಲಕ್ಷ್ಮಿ ನಾಯಕ್ 575 ( 92.83%) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ ಅವರಿಗೆ ಶುಭವನ್ನು ಹಾರೈಸಿರುತ್ತಾರೆ.