ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಶ್ರೀ ದೇವಿ ಭಗವತಿ ಅಮ್ಮನವರ 16ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಾ. 22ರಂದು ಜರುಗಲಿದೆ.
ಬ್ರಹ್ಮಶ್ರೀ ನಡ್ವಂತಾಡಿ ವೇದಮೂರ್ತಿ ಶ್ರೀಪಾದ ಪಾಂಗಣ್ಣಾಯ ಇವರ ವೈದಿಕ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 7.30ರಿಂದ ಆಚಾರ್ಯವರಣ, ಫಲನ್ಯಾಸ, ಸ್ವಸ್ತಿ ಪುಣ್ಯಾಹ, ಗಣಪತಿ ಹೋಮ, ಕಲಶ ಪೂಜೆ ನವಕ ಕಲಶಾಭಿಷೇಕ ದೇವಿಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ ಗಂಟೆ 9ಕ್ಕೆ ಗುರು ಪೂಜೆ, ಬೆಳಿಗ್ಗೆ ಗಂಟೆ 10ರಿಂದ ದುರ್ಗಾ ಹೋಮ ಮಧ್ಯಾಹ್ನ 12ಕ್ಕೆ ಶ್ರೀದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5ರಿಂದ ಶ್ರೀ ಚಕ್ರಪೂಜೆ ಆರಂಭ, ಶ್ರೀ ದೇವಿ ಭಗವತೀ ಅಮ್ಮ ಭಜನಾ ಮಂಡಳಿ ಮೇಲಂತಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ ಸಂಜೆ ಗಂಟೆ 7ಕ್ಕೆ ಶ್ರೀ ಚಕ್ರಪೂಜೆ ಸಂಪನ್ನ, ದೇವಿಗೆ ಮಹಾ ರಂಗ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ.
ರಾತ್ರಿ ಗಂಟೆ 8.35ರಿಂದ ಅಗ್ನಿಗುಳಿಗ ದೈವಕ್ಕೆ “ಸಿರಿ ಸಿಂಗಾರದ ಕೋಲ” ವಿಜೃಂಭಣೆಯಿಂದ ನಡೆಯಲಿದೆ. ದೇವಸ್ಥಾನದ ಧರ್ಮದರ್ಶಿ ಯೋಗೀಶ್ ಪೂಜಾರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಅಂಕಾಜೆ, ಕಾರ್ಯದರ್ಶಿ ಪ್ರಸನ್ನ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ಪ್ರಧಾನ ಅರ್ಚಕ ಯಶವಂತ ಶಾಂತಿ, ಭಜನಾ ಸಮಿತಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾಪಲಾಡಿ ಹಾಗೂ ಊರ ಹಾಗೂ ಪರವೂರ ಭಕ್ತರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮೇಲಂತಬೆಟ್ಟು ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಿದ್ದಾರೆ.