ಅಪರ ಸರಕಾರಿ ವಕೀಲ ಮನೋಹರ ಕುಮಾರ್ ನೂತನ ಕಚೇರಿ ಉದ್ಘಾಟನೆ

0

ಬೆಳ್ತಂಗಡಿ; ತಾಲೂಕಿಗೆ ಅಪರ ಸರಕಾರಿ ವಕೀಲರಾಗಿ ನೇಮಕಗೊಂಡಿರುವ ಮನೋಹರ ಕುಮಾರ್ ಇಳಂತಿಲ ಅವರ ನೂತನ ಕಚೇರಿ ತಾಲೂಕು ಪಂಚಾಯತ್ ಸಮೀಪದ ಕಟ್ಟಡದಲ್ಲಿ ಫೆ. ೨೮ರಂದು ಉದ್ಘಾಟನೆಗೊಂಡಿತು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಈ ನೂತನ ಕಚೇರಿಯನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಕೆ.ಪಿ.ಸಿ.ಸಿ ಕಾರ್ಯದರ್ಶಿ, ಹೈಕೋರ್ಟ್ ವಕೀಲ ರಕ್ಷಿತ್ ಶಿವರಾಂ ಶುಭ ಕೋರಿದರು.

ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಮ್, ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಮಾಜಿ ಜಿ.ಪಂ ಸದಸ್ಯರಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ನ್ಯಾಯವಾದಿಗಳಾದ ಬಿ.ಕೆ. ಧನಂಜಯ ರಾವ್, ಹಿರಿಯ ವಕೀಲರ ಸಂಘದ ಅಧ್ಯಕ್ಷ ಅಲೋಷಿಯಸ್ ಲೋಬೋ, ನಿವೃತ್ತ ಪ್ರಾಂಶುಪಾಲ ಕೃಷ್ಣಪ್ಪ ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಉಭಯ ಸಮಿತಿ ಅಧ್ಯಕ್ಷರುಗಳಾದ ನಾಗೇಶ್ ಕುಮಾರ್ ಗೌಡ, ಸತೀಶ್ ಕಾಶಿಪಟ್ಣ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ನಿತೀಶ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ಚಿದಾನಂದ ಎಲ್ದಕ್ಕ, ಮನೋಹರ ಅವರ ತಂದೆ ಜಿನ್ನಪ್ಪ ಪೂಜಾರಿ, ವಕೀಲರ ಸಂಘದ ಉಪಾಧ್ಯಕ್ಷರಾದ ಅಶೋಕ ಕರಿಯನೆಲ, ಪ್ರಧಾನ ಕಾರ್ಯದರ್ಶಿ ನವೀನ್ ಬಿ. ಕೆ, ಕೋಶಾಧಿಕಾರಿ ಪ್ರಶಾಂತ್, ಎಮ್, ಮಾಜಿ ಅದ್ಯಕ್ಷರುಗಳಾದ ಭಗೀರಥ, ಜಿ, ರಾಮಚಂದ್ರ ಗೌಡ, ಶಶಿಕಿರಣ್ ಜೈನ್, ಸೇವಿಯರ್ ಪಾಲೇಲಿ, ಪ್ರಸಾದ್ ಕೆ. ಎಸ್, ಹಿರಿಯ ವಕೀಲುರುಗಳಾದ ಅಜಿತ್, ಎನ್, ಗಂಗಾಧರ ಪೂಜಾರಿ, ಶ್ರೀನಿವಾಸ ಗೌಡ, ಶೈಲೇಶ್ ಆರ್ ಟೋಸರ್, ಮುರಳಿ ಬಲಿಪ, ಶ್ಯಾಮ ಭಟ್, ಮಹಮ್ಮದ್ ಹನೀಫ್, ಎಂ. ಬಿ ಸಂಪಿಗೆತ್ತಾಯ, ಗೋಪಾಲಕೃಷ್ಣ, ಕೆ, ಕೇಶವ ಗೌಡ, ಪಿ, ಸ್ವರ್ಣಲತಾ, ಎ, ಸುಭಾಷಿಣಿ ಆರ್, ಶಿವಯ್ಯ ಎಸ್, ಎಲ್, ವೇಣೂರು ವಲಯ ಅರಣ್ಯಾಧಿಕಾರಿ ಸುಬ್ರಹಣ್ಯ ಆಚಾರ್, ಉಪ ತಹಶಿಲ್ದಾರ್ ಜಯ, ಎ.ಡಿ.ಎಲ್ ಆರ್. ರೇಣುಕಾ ನಾಯ್ಕ್, ಉಪನೊಂದಣಾಧಿಕಾರಿ ನಾಗರಾಜು, ಗುರುದೇವ ವಿವಿದೋzಶ ಸಹಕಾರ ಸಂಘದ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ಉಪ್ಪಿನಂಗಡಿ ಸಿ. ಎ ಬ್ಯಾಂಕ್ ಮಾಜಿ ಅದ್ಯಕ್ಷ ಕೆ. ವಿ ಪ್ರಸಾದ್, ಮರೋಡಿ ಗ್ರಾ. ಪಂ ಅದ್ಯಕ್ಷ ರತ್ನಾಕರ ಬುಣ್ಣಾನ್, ನ. ಪಂ ಸದಸ್ಯರಾದ ಜಗದೀಶ್, ಡಿ, ರಾಜಶ್ರೀ ವಿ. ರಮಣ್, ಮೆಹಬೂಬ್, ಇಳಂತಿಲ ಗ್ರಾ. ಪಂ ಸದಸ್ಯ ಯು. ಕೆ ಇಸುಬು, ವಿಜಯ ಕುಮಾರ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಅಯೂಬ್ ಡಿ. ಕೆ, ಶ್ರೀಧರ ಕಳೆಂಜ, ತಾಲೂಕು ಕೆ. ಡಿ. ಪಿ ಸದಸ್ಯ ಸುನಿಲ್ ಜೈನ್, ಮಹಿಳಾ ಮಂಡಲಗಳ ಒಕ್ಕೂಟದ ಅದ್ಯಕ್ಷೆ ಸವಿತಾ ಜಯದೇವ್, ಪ್ರಮುಖರಾದ ಅಬ್ದುಲ್ ರಜಾಕ್ ಅಗರ್ತ, ಮಾಯಿಲ್ತೋಡಿ ಈಶ್ವರ ಭಟ್, ಸುಂದರ ಪೂಜಾರಿ, ಸುಮತಿ ಪ್ರಮೊದ್, ಶಾಂಭವಿ ಪಿ. ಬಂಗೇರ ಎಂ. ಕೆ ಪ್ರಸಾದ್, ಗುರುರಾಜ್ ಗುರಿಪಳ್ಳ, ಹರೀಶ್ ಪೊಕ್ಕಿ, ರಮೇಶ್ ಪೂಜಾರಿ ಪಡ್ಡಾಯಿಮಜಲು, ರವೀಂದ್ರ ಅಮೀನ್, ಬಳಂಜ, ವಸಂತ ಶೆಟ್ಟಿ, ಶೇಖರ ಲಾಯಿಲ, ಲೋಕೇಶ್ವರಿ ವಿನಯಚಂದ್ರ, ಅಭಿನಂದನ್ ಹರೀಶ್ ಕುಮಾರ್, ರಾಜೀವ ಸಾಲಿಯಾನ್ ಮುಂತಾದವರು ಉಪಸ್ಥಿತರಿದ್ದರು. ಮಾಜಿ ಶಾಸಕ ಕೆ. ವಸಂತ ಬಂಗೇರರ ಪತ್ನಿ ಸುಜಿತಾ ವಿ ಬಂಗೇರ ಮತ್ತು ಹಿರಿಯ ಪುತ್ರಿ ಪ್ರೀತಿತಾ ಬಂಗೇರ, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಡಾ| ಯು. ಪಿ. ಶಿವಾನಂದ, ಸಿ. ಇ. ಓ ಸಿಂಚನಾ ಊರುಬೈಲು, ವ್ಯವಸ್ಥಾಪಕರಾದ ಮಂಜುನಾಥ ರೈ, ಪಿ.ಆರ್.ಒ. ರಾಘವ ಶರ್ಮ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

ಬೆಳ್ತಂಗಡಿಯ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿ ನಿಯೋಜನೆ ನೆಲೆಯಲ್ಲಿ ಬಂಟ್ವಾಳದ ಸತೀಶ್ ಕುಮಾರ್ ಶಿವಗಿರಿಯವರು ಕರ್ತವ್ಯ ನಿರ್ವಹಿಸುತ್ತಿದ್ದರು. ೨೦೨೩ರಲ್ಲಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ನನ್ನ ಸ್ನೇಹಿತರಾದ ಸರ್ಕಾರಿ ಅಭಿಯೋಜಕ ದಿವ್ಯರಾಜ್ ರವರು ನೀವು ಯಾಕೆ ಇಲ್ಲಿಗೆ ಒಂದು ಅಪರ ಸರ್ಕಾರಿ ವಕೀಲರ ಖಾಯಂ ಸ್ಥಾನದ ಬಗ್ಗೆ ಪ್ರಯತ್ನಿಸಬಾರದು ಎಂದು ಸಲಹೆ ನೀಡಿದರು. ತಕ್ಷಣ ನಾನು ಈ ಬಗ್ಗೆ ಮಾಜಿ ಶಾಸಕ ಕೆ. ವಸಂತ ಬಂಗೇರರಲ್ಲಿ ವಿಚಾರ ಪ್ರಸ್ತಾಪಿಸಿ ಅವರ ಹೆಸರಿನಲ್ಲಿ ಆ ಬಗ್ಗೆ ಮನವಿ ತಯಾರಿಸಿ ಬೆಂಗಳೂರಿಗೆ ತೆರಳಿ ಕಾನೂನು ಸಚಿವರಾದ ಎಚ್. ಕೆ ಪಾಟೀಲ್ ಅವರನ್ನು ಬೇಟಿ ಮಾಡಿದಾಗ ಬಂಗೇರರ ಮನವಿಗೆ ತಕ್ಷಣ ಸ್ಪಂದಿಸಿದ ಕಾನೂನು ಸಚಿವರು ಸದ್ರಿ ಹುದ್ದೆ ಸೃಜಿಸುವುವಂತೆ ಸಂಬಂಧಪಟ್ಟವರನ್ನು ಕರೆಸಿ ಸೂಚಿಸಿದರು. ಅಲ್ಲದೆ ಬಂಗೇರರ ಬಳಿ ಇದಕ್ಕೆ ಸೂಕ್ತ ವ್ಯಕ್ತಿಯನ್ನು ಸೂಚಿಸಿ ಎಂದಾಗ ಅವರು ನನ್ನ ಹೆಸರನ್ನು ಸೂಚಿಸಿದರು. ಅದರಂತೆ ಬೆಳ್ತಂಗಡಿಗೆ ಹೊಸದಾಗಿ ಈ ಹುದ್ದೆ ಸೃಷ್ಟಿಯಾಗಿ, ಮೊದಲ ಅಪರ ಸರ್ಕಾರಿ ವಕೀಲನಾಗಿ ನನ್ನ ನೇಮಕವಾಗಿರುತ್ತದೆ. ಇತ್ತೀಚೆಗೆ ರಕ್ಷಿತ್ ಶಿವರಾಂರವರ ಶಿಫಾರಸ್ಸಿನಂತೆ ವಿಧಾನ ಸಭಾದ್ಯಕ್ಷರಾದ ಯು. ಟಿ ಖಾದರ್ ಅವರು ನನಗೆ ಬೆಳ್ತಂಗಡಿಯ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯಗಳ ಹಚ್ಚುವರಿ ಹೊಣೆಯನ್ನು ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದು ಅದರಂತೆ ನಾನು ಪ್ರಸ್ತುತ ಬೆಳ್ತಂಗಡಿಯ ಮೂರು ನ್ಯಾಯಾಲಯಗಳಲ್ಲಿ ಕರ್ನಾಟಕ ಸರಕಾರದ ಪರವಾಗಿ ಅಪರ ಸರ್ಕಾರಿ ವಕೀಲನಾಗಿ ಕರ್ತವ್ಯ ನಿರ್ವಹಿಸುತ್ತಿzನೆ. ಇದೀಗ ತಾಲೂಕು ಆಡಳಿತ ನನಗೆ ಈ ಸರ್ಕಾರಿ ಕಚೇರಿಯನ್ನು ನೀಡಿದ್ದು ಇದರಿಂದಾಗಿ ಕೆಲಸ ಕಾರ್ಯಗಳನ್ನು ನಡೆಸಲು ಅನೂಕೂಲವಾಗಿದೆ
– ಮನೋಹರ ಕುಮಾರ್, ಅಪರ ಸರಕಾರಿ ವಕೀಲರು

ಹಳೆಯ ಕಟ್ಟಡ ನೀಡಿದ್ದಕ್ಕೆ ಐವನ್ ಡಿ’ಸೋಜಾ ಆಕ್ಷೇಪ: ಅಪರ ಸರ್ಕಾರಿ ವಕೀಲರ ಕಚೇರಿ ಕೆಲಸಗಳನ್ನು ನಡೆಸಲು ಹಳೆಯ ಮತ್ತು ಸುಸಜ್ಜಿತವಲ್ಲದ ಕಟ್ಟಡ ನೀಡದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐವನ್ ಡಿ’ಸೋಜಾ ಅವರು, ಈ ಲೋಪವನ್ನು ತಕ್ಷಣವೇ ಸರಿಪಡಿಸುವಂತೆ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು.

LEAVE A REPLY

Please enter your comment!
Please enter your name here