ಮಡಂತ್ಯಾರು: ಪಾರೆಂಕಿ ಗ್ರಾಮದ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಸಮಿತಿ ಶ್ರೀ ರಾಮನಗರ ಹಾರಬೆಯಲ್ಲಿ ದೈವಗಳ ವಾರ್ಷಿಕ ನೇಮೋತ್ಸವ ಮಾ. 14ರoದು ಜರಗಿತು. ಬೆಳಿಗ್ಗೆ ಮಂಜುನಾಥ್ ಭಟ್ ಅಸ್ರಣ್ಣರು ಮಾಲಾಡಿ ಇವರ ಉಪಸ್ಥಿತಿಯಲ್ಲಿ ಗಣ ಹೋಮ, ನಾಗದೇವರಿಗೆ ತoಬಿಲ ಸೇವೆ, ಸಾಯಂಕಾಲ ಸತ್ಯನಾರಾಯಣ ಪೂಜೆ, ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆoಕಿ ಇವರಿಂದ ವಿಶೇಷ ಕುಣಿತ ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.
ನಂತರ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಜರಗಿತು. ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ ಹಾರಬೆ, ಪ್ರಧಾನ ಕಾರ್ಯದರ್ಶಿ ಮಹೇಶ್ ಕುಲಾಲ್ ಹಾರಬೆ, ಕೋಶಾಧಿಕಾರಿ ಪ್ರಮೀಳಾ ಹಾರಬೆ, ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.