ಸೊಣಂದರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರೋಗ್ಯ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಸೊಣಂದರು: ಮಾ.13 ರಂದು ಪೂರ್ವಾಹ್ನ 10.30 ಕ್ಕೆ ಸ್ಕೂಲ್ ಆಫ್ ​ ಸೋಷಿಯಲ್ ವರ್ಕ್​ ರೋಶನಿ ನಿಲಯ ಮಂಗಳೂರು ಇದರ ಎಮ್.ಎಸ್. ಡಬ್ಲ್ಯು ವಿಭಾಗ ಹಾಗೂ IQAC ಮತ್ತು ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಇದರ ಜೋಡು ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೊಣಂದೂರು ಇಲ್ಲಿನ ವಿದ್ಯಾರ್ಥಿಗಳಿಗೆ ಅರೋಗ್ಯ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಯಿತು.

ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಅಮ್ಮಿ ಎ. ಅವರು ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ಪರಿಸರ ಸ್ವಚ್ಚತೆ, ಪೋಷಕಾಂಶಗಳು ಮತ್ತು ಆರೋಗ್ಯಯುತ ಆಹಾರ ಅಭ್ಯಾಸಗಳು, ವೈಯಕ್ತಿಕ ಸ್ವಚ್ಛತೆ ಇವೆಲ್ಲಾದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.

ರೋಶನಿ ನಿಲಯದ ಪ್ರಾಧ್ಯಾಪಕರು ರಮ್ಯಾ ಬಿ. ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಬಗ್ಗೆ ಮಾಹಿತಿ ನೀಡಿ ಮಕ್ಕಳ ಸಹಾಯವಾಣಿಯ ಕುರಿತು ಅರಿವು ಮೂಡಿಸಿದರು. ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ಇದರ ಯೋಜನ ಸಯೋಜಕಿ ಸಿಸಿಲಿಯ ತಾವ್ರೋರವರು ವಿದ್ಯಾರ್ಥಿಗಳಿಗೆ ಲಿಂಗ ಸಮಾನತೆಯ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಅಧ್ಯಕ್ಷೀಯ ಸ್ಥಾನವನ್ನು ವಹಿಸಿಕೊಂಡ ಶಾಲ ಮುಖ್ಯೋಪಾಧ್ಯಾಯಿನಿ ಅನಿತಾ ಡಾಯಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮವನ್ನು ತಮ್ಮ ಶಾಲೆಯಲ್ಲಿ ಆಯೋಜಿಸಿದ್ದಕ್ಕೆ ಸ್ಕೂಲ್ ಆಫ್ ​ ಸೋಷಿಯಲ್ ವರ್ಕ್​ ರೋಶನಿ ನಿಲಯಕ್ಕೆ ವಂದನೆಯನ್ನು ನೀಡಿದರು. ಹಾಗೆಯೆ ವಿದ್ಯಾರ್ಥಿಗಳಿಗೆ ಪಡೆದ ಮಾಹಿತಿಯನ್ನು ಅರಿತುಕೊಂಡು ಸಂದರ್ಭಕನುಸಾರವಾಗಿ ಬಳಸಿಕೊಳ್ಳಲು ಕಿವಿ ಮಾತು ಹೇಳಿದರು.

ರೋಶನಿ ನಿಲಯದ ಪ್ರಥಮ ಎಮ್.ಎಸ್. ಡಬ್ಲ್ಯು ವಿದ್ಯಾರ್ಥಿಗಳಾದ ಭರತ್ ಮತ್ತು ಮೆಲ್ರೊಯ್ ರವರು ಕಾರ್ಯಕ್ರಮವನ್ನು ಆಯೋಜಿಸಿದರು.ಕಾರ್ಯಕ್ರಮವನ್ನು ಮೆಲ್ರೊಯ್ ರವರು ನಿರ್ವಹಿಸಿದರು. ಶಾಲಾ ಮುಖ್ಯಮಂತ್ರಿ ಸತೀಶ್ ರವರು ಸ್ವಾಗತಿಸಿ, ಶಿಮ್ರಾರವರು ವಂದಿಸಿದರು. ಒಟ್ಟು 35 ವಿದ್ಯಾರ್ಥಿಗಳು ಕಾರ್ಯಕ್ರಮಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here