
ಕಕ್ಕಿಂಜೆ: ಶ್ರೀ ಕೃಷ್ಣ ಆಸ್ಪತ್ರೆ ಹಾಗೂ ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಆ. 30ರಂದು ಮಧ್ಯಾಹ್ನ 2:30ರಿಂದ 5:30 ರವರೆಗೆ ಶ್ರೀ ಕೃಷ್ಣ ಆಸ್ಪತ್ರೆ, ಕಕ್ಕಿಂಜೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಕೆ.ಎಂ.ಸಿ ಆಸ್ಪತ್ರೆಯ ಅಸೊಸಿಯೇಟ್ ಪ್ರೊಫೆಸರ್ ಮತ್ತು ಕಣ್ಣಿನ ವಿಭಾಗ ಮುಖ್ಯಸ್ಥ ಡಾ.ಸಂಗೀತ ಜಗನ್ನಾಥನ್ ಮಾತನಾಡಿ, ಕೆ.ಎಂ.ಸಿ ಸಮುದಾಯ ವೈದ್ಯಕೀಯ ವಿಭಾಗದಿಂದ ಶ್ರೀ ಕೃಷ್ಣ ಆಸ್ಪತ್ರೆಯ ಸಹಯೋಗದೊಂದಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಶಿಬಿರವು ನಡೆಯಲಿದೆ,ಸಾರ್ವಜನಿಕರು ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆಯಬಹುದು ಎಂದರು.
ಶ್ರೀ ಕೃಷ್ಣ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುರಳಿಕೃಷ್ಣ ಇರ್ವತ್ರಾಯ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಾರ್ಮಾಡಿ ಗ್ರಾ. ಪಂ. ಅಧ್ಯಕ್ಷೆ ಶಾರದಾ, ಉದ್ಯಮಿ ಗಿರೀಶ್ ಕುದ್ರೆಂತಾಯ, ಕೆ.ಎಂ.ಸಿ ಆಸ್ಪತ್ರೆಯ ಜನಸಂಪರ್ಕಧಿಕಾರಿ ಉದಯ್, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ವಂದನಾ ಎಂ. ಇರ್ವತ್ರಾಯ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆಎಂಸಿ ಕಿವಿ ಮೂಗು ಗಂಟಲು ವಿಭಾಗದ ತಜ್ಞ ವೈದ್ಯ ಡಾ.ಕಿರಣ್ ಹೆಗ್ಡೆ, ಮಕ್ಕಳ ತಜ್ಞೆ ಡಾ.ದಿವ್ಯಾ ರವಿ, ಜನರಲ್ ಮೆಡಿಸಿನ್ ವಿಭಾಗದ ತಜ್ಞ ವೈದ್ಯೆ ಡಾ.ಪ್ರಕೃತಿ, ಕಣ್ಣಿನ ತಜ್ಞರಾದ ಡಾ.ವೈಷ್ಣವಿ, ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಲ್ಬೀನ್ ಜೊಸೆಫ್, ಡಾ.ಸಾತ್ವೀಕ್ ಕುದ್ದಣ್ಣಾಯ, ಡಾ.ಗ್ರೀಷ್ಮಾ,ಡಾ.ಶಾರೂನ್, ಡಾ.ಅನೀಶ್ ಕೃಷ್ಣ ಇರ್ವತ್ರಾಯ, ಆಡಳಿತಾಧಿಕಾರಿ ಜ್ಯೋತಿ ವಿ. ಸ್ವರೂಪ್, ಕೆ.ಎಂ.ಸಿ ಆಸ್ಪತ್ರೆಯ ಪಿ.ಆರ್.ಒ ಹರ್ಬರ್ಟ್ ಮೊದಲಾದವರಿದ್ದರು.
ಶಿಬಿರದಲ್ಲಿ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಜನಸಂಪರ್ಕಧಿಕಾರಿ ಉದಯ್ ಸನ್ಮಾನಿಸಲಾಯಿತು.
ಆರಿಶ್ ಕಾರ್ಯಕ್ರಮ ನಿರೂಪಿಸಿ, ಗಣೇಶ್ ಕಾರ್ಯಕ್ರಮ ಸಂಯೋಜಿದರು. ಡಾ.ವಂದನಾ ಎಂ. ಇರ್ವತ್ರಾಯ ಧನ್ಯವಾದವಿತ್ತರು.