
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಬುರುಡೆ ಚಿನ್ನಯ್ಯ ಪ್ರಕರಣದ ಉತ್ಖನನದ ವೇಳೆ ವಿವಿಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ,ಗೊಂದಲ ಮೂಡಿಸಿದ್ದ ಪ್ರಕರಣ ಸಂಬಂಧ ಸುಜಾತ ಭಟ್ ಪರ ವಕೀಲರಿಗೆ ನೋಟೀಸ್ ನೀಡಲು ಬೆಳ್ತಂಗಡಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ವಿಳಾಸದಲ್ಲಿ ಆತ ಪತ್ತೆಯಾಗಿಲ್ಲ. ಅಲ್ಲದೇ ಮೊಬೈಲ್ ಸ್ವಿಚ್ಛ್ ಆಫ್ ಮಾಡಿದ್ದು, ವಾಟ್ಸಾಪ್ ಕರೆಯಲ್ಲೂ ಸರಿಯಾದ ಮಾಹಿತಿ ಒದಗಿಸುತ್ತಿಲ್ಲವೆಂದು ತಿಳಿದುಬಂದಿದೆ.