ಅತ್ಯುತ್ತಮ ಸೇವೆ ನಮ್ಮ ನಿವೃತ್ತಿಯ ಬಳಿಕವೂ ನಮಗೆ ಗೌರವ ತಂದು ಕೊಡುತ್ತದೆ: ಇ.ಒ ಭವಾನಿಶಂಕರ್ – ವಿಕಲಚೇತನರ ನಿವೃತ್ತ ನೋಡೆಲ್ ಅಧಿಕಾರಿ ರತ್ನಾವತಿ‌ ಅವರಿಗೆ ಬೀಳ್ಕೊಡುಗೆ

0

ಬೆಳ್ತಂಗಡಿ: ಸರಕಾರಿ ಸೇವೆಯಲ್ಲಿ ನಾವು ಯಾವ ರೀತಿ ಜನಪರವಾಗಿ ತೊಡಗಿಸಿಕೊಳ್ಳುತ್ತೇವೋ ಅಷ್ಟೇ ಜನ ನಮ್ಮ ಸೇವೆಯನ್ನು ಗೌರವಿಸುತ್ತಾರೆ. ಜೊತೆಗೆ ನಮ್ಮ ತೃಪ್ತಿದಾಯಕ ಸೇವೆಯ ನಿಜವಾದ ಫಲಿತಾಂಶ ನಾವು ನಿವೃತ್ತರಾದ ಬಳಿಕ ಜನ ಕೊಡುವ ಗೌರವದಿಂದ ವ್ಯಕ್ತವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಹೇಳಿದರು.

ತಾ.ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ನೋಡೆಲ್ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಹಿರಿಯ ಮೇಲ್ವಿಚಾರಕಿ ರತ್ನಾವತಿ ಪಿ. ಲೋಕೇಶ್ ಅವರಿಗೆ ತಾಲೂಕು ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತರ ಬಳಗದಿಂದ ತಾ. ಪಂ ಸಭಾಂಗಣದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಕಲ ಚೇತನರ ತಾಲೂಕು ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಮಾತನಾಡಿ, ರತ್ನಾವತಿ ಅವರು ನಮಗೆಲ್ಲರಿಗೂ ತಾಯಿಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ‌. ಇಲಾಖಾ ವರದಿ‌ ತಯಾರಿ, ಸೇವಾ ವಿಶಾಲತೆ ಬಗ್ಗೆ ತಿಳಿಹೇಳಿ ಹೊಸ ವಿಆರ್‌ಡಬ್ಲ್ಯು ಗಳಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದರು. ಅವರ ಸೇವೆ ಅನನ್ಯ ಎಂದರು.

ನೂತನ ನೋಡೆಲ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ವಾಣಿಶ್ರೀ ಪ್ರವೀಣ್ ಈ ವೇಳೆ ಮಾತನಾಡಿದರು. ಉಡುಪಿ ದ.ಕ ಜಿಲ್ಲಾ ವಿಕಲಚೇತನರ ಸಂಘದ ಆಜೀವ ಸದಸ್ಯ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿವೃತ್ತರ ಅಭನಂದನಾ ಮಾತುಗಳನ್ನಾಡಿದರು.‌

ವಿಆರ್‌ಡಬ್ಲ್ಯು ಎಂ.ಜೆ ಜೋಸೆಫ್ ಇಂದಬೆಟ್ಟು, ಫೌಝಿಯಾ ನಗರ ಪಂಚಾಯತ್ ಅನಿಸಿಕೆ ವ್ಯಕ್ತಪಡಿಸಿದರು. ಬಳಿಕ ರತ್ನಾವತಿ ಪಿ. ಅವರನ್ನು ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು. ಗೌರವ ಸ್ವೀಕರಿಸಿ ಅವರು ಅನಿಸಿಕೆ ವ್ಯಕ್ತಪಡಿಸಿ, ನಾನು ನಿವೃತ್ತನಾದರೂ ಪಕ್ಕದ ನಡ ಗ್ರಾಮದಲ್ಲೇ ಇದ್ದು ನಿಮ್ಮ ಏನೇ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ ಎಂದು ವಿಕಲಚೇತನರಿಗೆ ಭರವಸೆ ತುಂಬಿದರು. ಹೇಮಲತಾ ನಿಡ್ಲೆ ಪ್ರಾರ್ಥನೆ ಹಾಡಿದರು. ಈರಣ್ಣ ಬೆಳಾಲು ಸ್ವಾಗತಿಸಿದರು.

LEAVE A REPLY

Please enter your comment!
Please enter your name here