ಇಂದಬೆಟ್ಟು: ಗ್ರಾಮ ಪಂಚಾಯತ್ ನ 2024-2025 ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತೆಗೆದುಕೊಂಡ ತಿರ್ಮಾನದಂತೆ ಸಾಮನ್ಯ ಸಭೆಯಲ್ಲಿ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡು ಕುಡಿಯುವ ನೀರಿನ ಶುಲ್ಕ ಪಾವತಿಸದ ಮನೆಯವರ ನೀರಿನ ಸಂಪರ್ಕ ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದ್ದು ಮಾ.1ರಂದು ಮೊದಲ ಹಂತದಲ್ಲಿ ಲಿಂಗಾಂತ್ಯಾರು ಹಾಗೂ ಪಿಚಲಾರು ಪ್ರದೇಶದಲ್ಲಿ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಪಂಪ್ ಆಪರೇಟರ್ ಹಾಗೂ ಸ್ಥಳೀಯರ ಸಮಕ್ಷಮದಲ್ಲಿ ಶುಲ್ಕ ಪಾವತಿಸದ ಮನೆಯವರ ನೀರಿನ ಸಂಪರ್ಕ ಕಡಿತಗೊಳಿಸಲಾಯಿತು.

ಈಗಾಗಲೇ ಗ್ರಾಮ ಪಂಚಾಯತ್ ಕುಡಿಯುವ ನೀರಿನ ಶುಲ್ಕ ಬಾಕಿ ಇರುವವರಿಗೆ ಪಂಚಾಯತ್ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿ ನೋಟಿಸ್ ನೀಡಲಾಗಿದ್ದು, ಹಲವರು ಗ್ರಾಮ ಪಂಚಾಯತ್ ಕಛೇರಿಗೆ ಭೇಟಿ ನೀಡಿ ಶುಲ್ಕ ಪಾವತಿಸಿರುತ್ತಾರೆ.

ಇನ್ನು ಶುಲ್ಕ ಪಾವತಿಸದ ಗ್ರಾಮದ ಇತರ ಭಾಗಗಳಲ್ಲಿ ನೀರಿನ ಸಂಪರ್ಕ ಮುಂದಿನ ಹಂತದಲ್ಲಿ ಕಡಿತಗೊಳಿಸಿಲಾಗುವುದು, ಮತ್ತು ನೀರನ್ನು ದುರುಪಯೋಗ ಮಾಡುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಈಗಾಗಲೇ ಮೆಸ್ಕಾಂ ಇಲಾಖೆ ಕುಡಿಯುವ ನೀರಿನ ವಿದ್ಯುತ್ ಸ್ಥಾವರದ ಬಿಲ್ ಪಾವತಿಸಲು ನೋಟಿಸ್ ನೀಡಿದ್ದು ಕುಡಿಯುವ ನೀರಿನ ಬಳಕೆದಾರರು ನಿಗದಿತ ಸಮಯದಲ್ಲಿ ಪಂಚಾಯತ್ ಗೆ ಶುಲ್ಕ ಪಾವತಿಸಿದರೆ ಮೆಸ್ಕಾಂ ಇಲಾಖೆಗೆ ವಿದ್ಯುತ್ ಬಿಲ್ ಪಾವತಿಸಬಹುದು ಎಂದು ಪಂಚಾಯತ್ ಆಡಳಿತ ಮಂಡಳಿ ತಿಳಿಸಿದೆ.

ಈಗಾಗಲೇ ಕುಡಿಯುವ ನೀರಿನ ಜೆ.ಜೆ.ಎಂ ಯೋಜನೆಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಬಳಕೆದಾರರಿಗೆ ಉಪಯುಕ್ತವಾಗಲಿದೆ.