ಗೇರುಕಟ್ಟೆ: ಹೈಸ್ಕೂಲ್ ಮೈದಾನದಲ್ಲಿ ಫೆ. 23ರಂದು ಲತೀಫ್ ಪರಿಮ, ಯೋಗಿಶ್ ಎಸ್. ಆರ್. ಹಾಗೂ ಸಾದಿಕ್ ಕೆಂಪಿ ರವರ ನೇತೃತ್ವದಲ್ಲಿ ಸೌಹಾರ್ಧ ಟ್ರೋಪಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ನಡೆಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಲತೀಫ್ ಪರಿಮ, ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ನೇವಿಲ್ ಮೊರಾಸ್, ನಿತೇಶ್ ಜಾರಿಗೆಬೈಲು, ಮನ್ಸೂರ್ ಜಿ., ಯೋಗಿಶ್ ಸುವರ್ಣ ಎಸ್. ಆರ್., ಹಬೀಬ್ ಕಜೆಮಾರ್, ರಫೀಕ್ ಪರಪ್ಪು, ಫಯಾಜ್ ಕೆ. ಎಂ., ಸಂದೀಪ್ ನಾಳ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಶುಕೂರ್ ಕೆಂಪಿ ಉಪ್ಪಿನಂಗಡಿ ಹಾಗೂ ಯೋಗಿಶ್ ಎಸ್. ಆರ್. ಕಾರ್ಯನಿರ್ವಹಿಸಿದರು. ಪ್ರಥಮ ಸ್ಥಾನವನ್ನು ಪ್ಲೇ ಬಾಯ್ಸ್ ಬೊಳ್ಳುಕಲ್ಲು, ದ್ವಿತೀಯ ಸ್ಥಾನವನ್ನು ವಿಫ್ನೇಶ್ ಪವರ್ ಸಿಸ್ಟಮ್ ನಾಳ, ತೃತೀಯ ಸ್ಥಾನವನ್ನು ಎಸ್. ಆರ್. ಹೆಚ್. ಗೇರುಕಟ್ಟೆ, ಚತುರ್ಥ ಸ್ಥಾನವನ್ನು ವೈ. ಎಫ್. ಒ. ಓಡಿಲ್ನಾಳ ತಂಡ ಹಾಗೂ ಉತ್ತಮ ಶಿಸ್ತಿನ ತಂಡ ವೈ. ಎಫ್. ಒ. ಓಡಿಲ್ನಾಳ ತಂಡ, ಸರಣಿ ಶ್ರೇಷ್ಠರಾಗಿ ಸಂದೀಪ್ ನಾಳ, ಪಂದ್ಯಶ್ರೇಷ್ಠರಾಗಿ ಸಾದಿಕ್ ಎರುಕಡಪ್ಪು, ಉತ್ತಮ ಬ್ಯಾಟ್ಸ್ ಮನ್ ಆಗಿ ಅಮೀನ್ ಎರುಕಡಪ್ಪು, ಉತ್ತಮ ಬೌಲರ್ ಆಗಿ ರವಿ ನಾಳ, ಉತ್ತಮ ಫೀಲ್ಡರ್ ಆಗಿ ಸಂಶುದ್ದೀನ್ ಜಾರಿಗೆಬೈಲು, ಉತ್ತಮ ವಿಕೇಟ್ ಕೀಪರ್ ಆಗಿ ಶರೀಫ್ ಗೇರುಕಟ್ಟೆ, ಉದಯೋನ್ಮುಕ ಆಟಗಾರನಾಗಿ ಹಾಸಿಮ್ ಗೇರುಕಟ್ಟೆ ಪ್ರಶಸ್ತಿ ಸ್ವೀಕರಿಸಿದರು.