ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ: ಕುಂಭಾ ಸಮಾಗಮ – ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

0

ಬಂದಾರು: ಕುಂಬಾರರ ಸೇವಾ ಸಂಘ ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗ ಶ್ರೀರಾಮನಗರ ಬಂದಾರು. ಧರ್ಮ ಸಂಸ್ಕಾರ ಶಿಕ್ಷಣ ಇವುಗಳ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ ಕುಂಭಾ ಸಮಾಗಮ, ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಮತ್ತು ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಫೆ. 22ರಂದು ಶ್ರೀರಾಮನಗರ ಶಿವಪ್ರಿಯ ಮೈದಾನದಲ್ಲಿ ನಡೆಯಿತು.

ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷರಾದ ಶಿವ ಕುಮಾರ ಚೌಡ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು, ಬಂದಾರು ಕುಂಬಾರರ ಸೇವಾ ಸಂಘ ಇದರ ಅಧ್ಯಕ್ಷ ಕೆಂಚಪ್ಪ ಕುಂಬಾರ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಯುವ ಉದ್ಯಮಿ ಕಿರಣ್ ಚಂದ್ರ ಡಿ ಪುಷ್ಪಗಿರಿ, ಕರಾವಳಿ ಕುಂಬಾರರ ಯುವ ವೇದಿಕೆ ಮಂಗಳೂರು ಇದರ ಸ್ಥಾಪಕ ಅಧ್ಯಕ್ಷ ಅಣ್ಣಯ್ಯ ಕುಲಾಲ್, ಬೆಳ್ತಂಗಡಿ ಕುಂಬಾರರ ಯಾನೆ ಮೂಲ್ಯರ ಸೇವಾ ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ನಿವೃತ್ತ ಕಂದಾಯ ಅಧಿಕಾರಿ ಪದ್ಮಕುಮಾರ್ ಹೆಚ್., ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪುತ್ತೂರು ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋದರ ಕುಲಾಲ್, ಬಂದಾರು ಕೆರೆಮಜಲು ರವೀಂದ್ರ ಪಾoಗಣ್ಣಾಯ, ಬೆಳ್ತಂಗಡಿ ಏಳು ಮಾಗಣೆ ಕುಂಬಾರ ಗುರಿಕಾರ ಪುಟ್ಟ, ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ, ಐದು ಮಾಗಣೆ ಗುರಿಕಾರರಾದ ಗಂಗಾಧರ ಕುಂಬಾರ, ಬಂದಾರು ಶ್ರೀರಾಮ ನಗರ ಗುರಿಕಾರರಾದ ಬಾಬು ಕುಂಬಾರ, ಶೀನಪ್ಪ ಕುಂಬಾರ, ಬಂದಾರು ಕುಂಬಾರರ ಸೇವಾ ಸಂಘದ ಕಾರ್ಯದರ್ಶಿ ವಿಶ್ವನಾಥ ಕುಂಬಾರ ಶ್ರೀರಾಮನಗರ, ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ ಬಿ. ಕೆ., ಕಾರ್ಯದರ್ಶಿ ಚಂದ್ರಶೇಖರ ಬಿ. ಕೆ., ಕ್ರೀಡಾಕೂಟದ ಕಾರ್ಯಾಧ್ಯಕ್ಷರಾದ ಉದಯ ಬಿ. ಕೆ., ಪ್ರಕಾಶ್ ಬಿ. ಕೆ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕ ಪ್ರಶಾಂತ್ ಸುವರ್ಣ ಮರೋಡಿ, ಮೆಸ್ಕಾಂ ಇಲಾಖೆಯ ಸಂದೀಪ್ ಎಂ. ಮಿತ್ತೂರು, ಯೋಗ ಶಿಕ್ಷಕ ಕುಶಾಲಪ್ಪ ಎಂ. ನೆಕ್ಕರಾಜೆ, ನಿವೃತ್ತ ಸೈನಿಕ ರಮೇಶ್ ಕೊಂಕನೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆ ಕಣ್ಣಿನ ತಜ್ಞ ವೈದ್ಯ ಡಾ |ರಮೇಶ್ ಬೆಳ್ತಂಗಡಿ, ರಾಜ್ಯ ಮಟ್ಟದ ಕ್ರೀಡಾಪಟು ತೇಜಶ್ವಿನಿ ಪೂಜಾರಿ ಬೊಲ್ಜೆ ಬಂದಾರು ಹಾಗೂ ಕುಂಬಾರ ಸಮಾಜದ ಸಾಧಕರು, ರಾಜ್ಯ ಹಾಗೂ ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿದ ಬಂದಾರು ಕುಂಬಾರ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.

ವಿವೇಕಾನಂದ ಕಾಲೇಜು ಮುಂಡಾಜೆ ಹಾಗೂ ಬಂದಾರು ಪ್ರಾಥಮಿಕ ಶಾಲೆಯ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಿಂದ ವಾಲಿಬಾಲ್ ಪ್ರದರ್ಶನ ಪಂದ್ಯಕೂಟ ನಡೆಯಿತು.

ಬೆಳಗ್ಗೆ ಗಣಹೋಮ, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಜಾತಿ ಬಾಂಧವರ ವಾಲಿಬಾಲ್ ಪಂದ್ಯಾಟ ಜರುಗಿತು. ಉದಯ ಬಿ. ಕೆ. ಸ್ವಾಗತಿಸಿ, ವಿಜಯ ಕಾಯರ್ತಡ್ಕ ನಿರೂಪಿಸಿ, ದೀಕ್ಷಾ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here