ಜೆ. ಸಿ. ಐ ಕೊಕ್ಕಡ ಕಪಿಲಾ ಘಟಕದಿಂದ ಎಲ್. ಡಿ. ಎಂ. ಟಿ ತರಬೇತಿ

0

ಕೊಕ್ಕಡ: ಗ್ರಾಮಭ್ಯೋದ್ಧಿಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ, ವೇದಿಕೆಯಲ್ಲಿ ಫೆ. 22ರಂದು ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಜೆ.ಸಿ.ಐ ನ ಸದಸ್ಯರಿಗೆ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮವನ್ನು ಜೆಸಿಐ ನ ವಲಯ 15ರ ವಲಯದ ಉಪಾಧ್ಯಕ್ಷ ಜೆ. ಸಿ. ಸೆನ್ ಸುಹಾಸ್ ಎ.ಪಿ.ಎಸ್ ಮರಿಕೆ ನಡೆಸಿಕೊಟ್ಟರು. ಜೆ. ಸಿ. ರಿತೇಶ್ ಸ್ಟೈಲಾ ಮತ್ತು ಜೆ. ಸಿ ಪ್ರಜ್ವಲ್ ಲೋಬೊ ರವರಿಗೆ ವಲಯದ ಉಪಾಧ್ಯಕ್ಷ ಸುಹಾಸ್ ಮರಿಕೆಯವರಿಂದ ಪ್ರಮಾಣವಚನ ಸ್ವೀಕರಿಸಿ ಅಧಿಕೃತವಾಗಿ ಜೇಸಿ ಸಂಸ್ಥೆಗೆ ಸೇರ್ಪಡೆಗೊಂಡರು.

ವಲಯದ ಉಪಾಧ್ಯಕ್ಷರ ಪರಿಚಯವನ್ನು ಜೆ. ಸಿ ಕವಿತಾ, ಹೊಸ ಸದಸ್ಯರ ಪರಿಚಯವನ್ನು ಜೆ. ಸಿ ಅಕ್ಷತ್ ರೈ ಮತ್ತು ಜೆ. ಸಿ ವಿಕ್ಟರ್ ಸಭೆಗೆ ಪರಿಚಯಿಸಿದರು.

ಜೆಸಿಐ ಯ ವಲಯ 15ರ ವಲಯದ PR coordinator ಆಗಿರುವ ಜೆ. ಸಿ ಸೆನ್ ಜೀತೇಶ್ ಪಿರೇರಾ ಕಾರ್ಯಕ್ರಮದ ಅನಿಸಿಕೆಯನ್ನು ತಿಳಿಸಿದರು.

ಪೂರ್ವಧ್ಯಕ್ಷ ಜೆ. ಎಫ್. ಎಮ್ ಶ್ರೀಧರ್ ರಾವ್, ನಿಕಟಪೂರ್ವಧ್ಯಕ್ಷ ಜೆ. ಸಿ ಸಂತೋಷ್ ಜೈನ್, ಉಪಾಧ್ಯಕ್ಷರಾದ ಜೆ. ಸಿ ಪಿ. ಟಿ ಸಬಸ್ಟಿನ್, ದೀಪಾ, ಯೋಗೀಶ್, ಹೆಚ್. ಜಿ. ಎಫ್ ಜೇಸಿಂತಾ ಡಿಸೋಜಾ, ಪಂಚಾಯತಿನ ಸದಸ್ಯರಾದ ನಿತ್ಯಾನಂದ ರೈ, ಕಳೆoಜ ಗ್ರಾಮದ ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ ಹಾಗೂ ಜೆ. ಸಿ. ಯ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

ಘಟಕದ ಮಾರ್ಗದರ್ಶಕರಗಿರುವ ಹೆಚ್‌.ಜಿ.ಎಸ್ ಜೋಸೆಫ್ ಪಿರೇರಾ ನಿರೂಪಿಸಿ, ಜೆ. ಸಿ. ಡಾ. ಶೋಭಾ ಪಿ. ಸ್ವಾಗತಿಸಿ, ಜೆ. ಸಿ ಧನುಷ್ ಜೈನ್ ಜೇಸಿವಾಣಿ ವಾಚಿಸಿದರು. ಜೆ. ಸಿ ಚಂದನ ಪಿ. ಕಾರ್ಯಕ್ರಮವನ್ನು ವಂದಿಸಿದರು.

LEAVE A REPLY

Please enter your comment!
Please enter your name here