ಮಡಂತ್ಯಾರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಡಂತ್ಯಾರ್ ಪಾರೆಂಕಿ ಗ್ರಾಮದ ಕಡ್ತಿಲ ಎಸ್ಟೇಟ್ ನಲ್ಲಿ ನೂತನವಾಗಿ ಪ್ರಾರಂಭವಾದ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗುರು ಪೂಜೆಯ ಬಳಿಕ ಜರಗಿದ ಸಭೆಯಲ್ಲಿ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ನೀಡಿ ಆಹ್ವಾನಿಸಿ, ಮಾರ್ಚ್ 1ರಿಂದ 5ರವರೆಗೆ ನಡೆಯುವ ಜಾತ್ರೋತ್ಸವಕ್ಕೆ ವಿಶೇಷವಾಗಿ 2ರಂದು ನಡೆಯುವ ಮಡಿಲ ಸೇವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾಜ ಧಾರ್ಮಿಕತೆಯ ಜೊತೆ ಸಂಘಟನಾತ್ಮಕವಾಗಿ ಬಲಿಷ್ಟವಾಗ ಬೇಕೆಂದು ಕರೆ ನೀಡಿದರು.

ಸಂಘದ ಗೌರವಾಧ್ಯಕ್ಷ ಯೋಗೇಶ್ ಪೂಜಾರಿ ಕಡ್ತಿಲ್ಲ, ಅಧ್ಯಕ್ಷ ವೆಂಕಪ್ಪ ಪೂಜಾರಿ ಕೊಡ್ಲಕ್ಕೆ, ಗುರುನಾರಾಯಣಸ್ವಾಮಿ ಸೇವಾ ಸಂಘ ಬೆಳ್ತಗಡಿಯ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ಎಂ. ಕೆ. ಪ್ರಸಾದ್, ಡಾ. ನವೀನ್ ಮರಿಕ್ಕೆ, ಪ್ರಮೋದ್ ಕುಮಾರ್, ಜಯರಾಮ್ ಬಂಗೇರ, ಗೆಜ್ಜೆಗಿರಿ ಆಡಳಿತ ಸಮಿತಿಯ ಶ್ರೀ ನಾರಾಯಣ ಮಚ್ಚಿನ, ಗ್ರಾಮ ಪಂಚಾಯತ ಅಧ್ಯಕ್ಷೆ ರೂಪ ನವೀನ್ ಕೊಡ್ಲಕ್ಕೆ, ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಆಶಾ ಉಮೇಶ್, ಮಲ್ಲಿಕಾ ಹರಿಶ್ಚಂದ್ರ, ಗೋಪಾಲ್ ಕೊಲ್ಲಜೆ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಸಚಿನ್ ಪೂಜಾರಿ ಕಾರ್ಯದರ್ಶಿ ಸುಭಾಷ್ ಚಂದ್ರ ಪೂಜಾರಿ ಹಾರಬೆ, ಸತೀಶ್ ಪೂಜಾರಿ ಹಾರಬೆ, ಪ್ರಭಾಕರ ಬಂಗೇರ, ಬಿನುತಾ ಬಂಗೇರ, ಮೋನಪ್ಪ ಕಂಡೆತ್ಯಾರು, ವಸಂತ ಸಾಲಿಯನ್ ಕಾಪಿನಡ್ಕ, ರಕ್ಷಿತ್ ಶಿವರಾಂ, ಪುನೀತ್ ಕುಮಾರ್ ಮಾಲಾಡಿ, ಪ್ರಶಾಂತ್ ಪೂಜಾರಿ ಪಾರೆಂಕಿ, ವಿಶ್ವನಾಥ್ ಪೂಜಾರಿ ಶ್ರೀರಾಮನಗರ, ಉಮೇಶ್ ಸುವರ್ಣ ಅಲೆಕ್ಕಿ, ವಿಶ್ವನಾಥ್ ಪೂಜಾರಿ ಕೋಟೆ, ಉಮೇಶ್ ಕೋಟೆ, ಗಿರಿಯಪ್ಪ ಪೂಜಾರಿ ಕೊಡ್ಲಕ್ಕೆ, ತುಳಸಿ ಹಾರಬೆ, ಶೇಷಗಿರಿ ನಾಯಕ್, ಯೋಗೀಶ್ ಕೊಡ್ಲಕ್ಕೆ, ನವೀನ್ ಕೊಡ್ಲಕ್ಕೆ ಉಪಸ್ಥಿತರಿದ್ದರು.

ಪ್ರವೀಣ್ ಕುಮಾರ್ ದೋಟ ಕಾರ್ಯಕ್ರಮ ನಿರೂಪಿಸಿದರು.