ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆಸಲಾದ ಹೊಲಿಗೆ ತರಬೇತಿ ಕೇಂದ್ರದ ಸಮಾರೋಪ ಸಮಾರಂಭ ಹಳ್ಳಿoಗೇರಿ ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಗೌರವಾನ್ವಿತ ಯೋಜನಾಧಿಕಾರಿ ಸುರೇಂದ್ರ ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಮಾತೃಶ್ರೀ ಅಮ್ಮನವರು ಉಚಿತ ಟೈಲರಿಂಗ್ ತರಬೇತಿ ನೀಡಲು ಅವಕಾಶ ಕಲ್ಪಿಸಿದ್ದು 3 ತಿಂಗಳ ಕಾಲ ಕಲಿತ ವಿದ್ಯೆ ನಿಮ್ಮ ಮುಂದಿನ ಭವಿಷ್ಯಕ್ಕೆ ದಾರಿ ದೀಪವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉಪ್ಪಾರಪಳಿಕೆ ಶಾಲೆಯ ಮುಖ್ಯೋಪಾಧ್ಯಾಯಿನಿ ಸರಸ್ವತಿ ಮಹಿಳೆಯರು ಮನೆಯಲ್ಲಿ ಕೂತು ಮನೆಯ ಕೆಲಸದೊಂದಿಗೆ ಸ್ವಂತ ಉದ್ಯೋಗವನ್ನು ಮಾಡಿ ಮನೆಯವರಿಗೆ ನೆರವಾಗಲು ಟೈಲರಿಂಗ್ ಉದ್ಯಮವು ಉತ್ತಮ ಅವಕಾಶವಾಗಿದ್ದು ಇಲ್ಲಿ ಪಡೆದ ತರಬೇತಿಯು ಇಲ್ಲಿಗೆ ಕೊನೆಗೊಳ್ಳದೆ ನಿರಂತರವಾಗಿ ಇದನ್ನು ಮುಂದುವರಿಸಿ ಸ್ವಉದ್ಯೋಗವನ್ನು ಮಾಡುವುದರೊಂದಿಗೆ ಉತ್ತಮ ಆದಾಯವನ್ನು ಗಳಿಸಿ ಎಂದರು.
ತಾಲ್ಲೂಕು ಜನ ಜಾಗ್ರತಿಯ ವೇದಿಕೆಯ ಸದಸ್ಯ ಉಸ್ಮಾನ್, ಗ್ರಾಮ ಪಂಚಾಯಿತಿ ಸದಸ್ಯ ಪವಿತ್ರ, ಹೊಲಿಗೆ ತರಬೇತಿ ಕೇಂದ್ರದ ಶಿಕ್ಷಕಿ ಸುಶೀಲ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ತರಬೇತಿಯನ್ನ ಪಡಕೊಂಡ ಸಫ್ರಿನ ನಾ ರೀನಾ ಅಶ್ವಿನಿ ಮತ್ತು ಲಲಿತಾರವರು ಅನಿಸಿಕೆಯನ್ನು ವ್ಯಕ್ತಪಡಿಸಿದರು. ಉಪ್ಪಾರಕಲಿಕೆ ಸೇವಾಪ್ರತಿನಿಧಿ ರೋಹಿಣಿ ಉಪಸ್ಥಿತರಿದ್ದರು.
ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾ ವಸಂತ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಕುಸುಮ ಸ್ವಾಗತಿಸಿ, ಮೇಲ್ವಿಚಾರಕಿ ಭಾಗೀರಥಿ ಧನ್ಯವಾದ ನೀಡಿದರು.