ಮಂದಿರಗಳ ರಕ್ಷಣೆ ದೃಷ್ಟಿಯಿಂದ ಕರ್ನಾಟಕ ಮಂದಿರ ಮಹಾಸಂಘದಿಂದ ತಹಶೀಲ್ದಾರರಿಗೆ ಮನವಿ

0

ಬೆಳ್ತಂಗಡಿ: ಕರ್ನಾಟಕ ಮಂದಿರ ಮಹಾಸಂಘದ ವತಿಯಿಂದ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ 1 ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಏರ್ಪಡಿಸಲಾಗಿತ್ತು. ಈ ಅಧಿವೇಶನದಲ್ಲಿ 80ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಈ ನಿರ್ಣಯವನ್ನು ಸರಕಾರವು ಅನುಷ್ಠಾನಕ್ಕೆ ತರಬೇಕೆಂದು ಬೆಳ್ತಂಗಡಿ ತಹಶೀಲ್ದಾರ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಂದಿರ ಮಹಾ ಸಂಘದ ತಾಲೂಕಿನ ಸಮನ್ವಯಕ ಜಯ ಸಾಲಿಯಾನ್ ಬಳಂಜ, ಮಲೆಬೆಟ್ಟು ಶ್ರೀ ಗಣಪತಿ ಸುಬ್ರಮಣ್ಯ ದೇವಸ್ಥಾನದ ಸದಾಶಿವ ಹೊಳ್ಳ, ಪಡಂಗಡಿ ಶ್ರೀ ಮೂಜುಲ್ನಾಯ ಬ್ರಹ್ಮ ದೈವಸ್ಥಾನದ ವಾಮನ ಬಾಳಿಗ, ಮುಂಡೂರು ಶ್ರೀ ನಾಗಂಬಿಕಾ ದೇವಸ್ಥಾನದ ಸಂತೋಷ ಕುಮಾರ್, ಪೆರಿಯಡ್ಕ ಶ್ರೀ ರಾಮ ಭಜನಾ ಮಂದಿರದ ಹರೀಶ್ ಮುದ್ದಿನಡ್ಕ, ಯೋಗೀಶ್ ಕೆಂಬರ್ಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here