ಗೇರುಕಟ್ಟೆ: ಪರಪ್ಪು ಜಮಾಅತ್ ನಿಂದ ಅಭಿನಂದನಾ ಸಭೆ – ಮುಸ್ಲಿಂ ಯೂತ್ ವಿಂಗ್ ಸಮಿತಿಗೆ ಗೌರವಾರ್ಪಣೆ

0

ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಅಭಿನಂದನಾ ಸಭೆ ನಡೆಯಿತು. ಜಮಾಆತ್ ಅಧ್ಯಕ್ಷ ಅಬೂಬಕ್ಕರ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಖತೀಬು ಎಫ್. ಎಚ್. ಮಹಮ್ಮದ್ ಮಿಸ್ಬಾಹಿ ದುವಾ ನೆರವೇರಿಸಿ, ಅಭಿನಂದನಾ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಮ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಉರೂಸ್ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಜಿ. ಡಿ., ಯೂತ್ ವಿಂಗ್ ನ ಅಧ್ಯಕ್ಷ ಹಮೀದ್ ಜಿ. ಡಿ., ಸ್ವಲಾತ್ ಸಮಿತಿಯ ಅಧ್ಯಕ್ಷ ಎಸ್. ಯು. ಆಸಿಫ್ ಹಾಜಿ, ಎಸ್. ಎಸ್. ಎಫ್ ಗೇರುಕಟ್ಟೆ ಯೂನಿಟ್ ಅದ್ಯಕ್ಷ ನೌಷದ್, ಎಸ್.ಎಸ್.ಎಫ್ ಪರಪ್ಪು ಯೂನಿಟ್ ನ ಜಬ್ಬಾರ್ ಪರಪ್ಪುರವರನ್ನು ಗೌರವಿಸಲಾಯಿತು.

2025 ನೇ ಸಾಲಿನ ಉರೂಸ್ ಕಾರ್ಯಕ್ರಮಕ್ಕೆ ಮುಂಚಿತವಾಗಿ ಪರಪ್ಪು ಜಮಾಅತ್ ಗೆ ಒಳಪಟ್ಟ ಗೇರುಕಟ್ಟೆ ಪರಪ್ಪು ಸುಣ್ಣಲಡ್ಡ ಮುಳ್ಳಗುಡ್ಡೆ ಬಟ್ಟೆಮಾರು ಪ್ರದೇಶದ ಮುಸ್ಲಿಮ್ ಯೂತ್ ವಿಂಗ್ ನ ಸದಸ್ಯರು ಸೇರಿ ಪರಪ್ಪು ದರ್ಗಾದ ಬಳಿ ಅವಶ್ಯವಿರುವ ಶಾಶ್ವತ ಕಾಮಗಾರಿಗಳಾದ ಇಂಟರ್ಲಾಕ್ ಅಳವಡಿಕೆ, ಪ್ರಮುಖ ದ್ವಾರಗಳಲ್ಲಿ ಗೇಟ್ ನಿರ್ಮಾಣ, ಸುಸಜ್ಜಿತವಾದ ಗಾರ್ಡನ್ ಕಾಮಗಾರಿಯನ್ನು ನಡೆಸಿಕೊಟ್ಟರು. ಸ್ವಲಾತ್ ಸಮಿತಿಯವರು ದರ್ಗಾದ ಪ್ರಮುಖ ಬಾಗಿಲುಗಳಿಗೆ ಸ್ಟೀಲ್ ಗೇಟ್ ನಿರ್ಮಾಣ ಹಾಗೂ ಪರಪ್ಪು ಮತ್ತು ಗೇರುಕಟ್ಟೆ ಎಸ್.ಎಸ್.ಎಫ್ ಯುನಿಟ್ ನ ಸಮಿತಿಯವರು ಶಾಶ್ವತ ಗೇಟ್ ಗಳನ್ನು ನಿರ್ಮಿಸಿ ಕೊಟ್ಟಿದ್ದರು.

ಹಾಗೂ 2025 ನೇ ಉರೂಸ್ ಕಾರ್ಯಕ್ರಮವನ್ನು ಅತ್ಯಂತ ಸುಸೂತ್ರವಾಗಿ ನಡೆಸಿಕೊಟ್ಟ ಉರೂಸ್ ಸಮಿತಿಯವರಿಗೆ ಪರಪ್ಪು ಜಮಾಅತ್ ಆಡಳಿತ ಸಮಿತಿ ವತಿಯಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು.
ಈ ಸಮಾರಂಭದಲ್ಲಿ ಮುಅಲ್ಲಿಮರಾದ ಮಹಮ್ಮದ್ ಝಿಯಾದ್ ಮುಈನಿ, ಸಮಿತಿ ಉಪಾದ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಅಬ್ದುಲ್ ಬಶೀರ್, ಕೋಶಾಧಿಕಾರಿ ಬಶೀರ್ ಎಸ್. ಎ., ಕೆ.ಎಮ್.ಜೆ ಕಾರ್ಯದರ್ಶಿ ಎಸ್.ಎ. ಹಮೀದ್ ಹಾಜಿ, ಎಸ್.ವೈ.ಎಸ್ ಅಧ್ಯಕ್ಷರಾದ ಸೈಫುಲ್ಲಾ ಎಚ್.ಎಸ್., ಮಹಮ್ಮದ್ ಹನೀಫ್, ಇರ್ಫಾನ್ ಎಸ್., ಹಿದಾಯತುಲ್ಲ ಬಟ್ಟೆಮಾರು, ಮಹಮ್ಮದ್ ಎನ್. ಎನ್., ಆದಂ ಹಾಜಿ ಬಿ.ಎಮ್., ಸಿದ್ದೀಕ್ ಜಿ. ಎಚ್., ಫಯಾಜ್ ಕೆ.ಎಂ, ರಹಿಮಾನ್ ಮಾಸ್ಟರ್, ಅಬ್ಬಾಸ್ ಬಟ್ಟೆಮಾರು, ಶೇಖುಂಞ ಎಸ್., ರನೀಝ್ ಎಸ್. ಎ., ನಾಸಿರ್ ಗೇರುಕಟ್ಟೆ, ಅಶ್ರಫ್ ಬಟ್ಟೆಮಾರು ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here