ಮುಳಿಕ್ಕಾರು: ಅನಾದಿಕಾಲದಿಂದ ನಮ್ಮ ಪೂರ್ವಜರು ಅನುಸರಿಕೊಂಡು ಬರುತ್ತಿದ್ದ ದೈವಾರಾಧನೆಯ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಭಾರತೀಯ ಮಜ್ದೂರು ಸಂಘದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಜಯರಾಜ್ ಸಾಲಿಯಾನ್ ರವರು ಹೇಳಿದರು.

ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಕಾನ ಎಂಬಲ್ಲಿ ಅಜೀರ್ಣವಸ್ಥೆಯಲ್ಲಿರುವ ಪುರಾತನ ಕಾಲದ ದೈವ ದೇವರ ಸಾನಿದ್ಯಕ್ಕೆ ಭೇಟಿ ನೀಡಿ ಮಾತಾಡಿದ ಅವರು ತುಳುನಾಡಿನ ದೈವಗಳಿಗೆ ಬಹಳ ಶಕ್ತಿ ಇದೆ, ಕಾರಣಿಕ ಇದೆ. ದೇವರಿಗಿಂತಲೂ ಮುಂಚೆ ನಾವು ದೈವವನ್ನು ಪೂಜಿಸುತ್ತೇವೆ. ನಮ್ಮ ಹಿರಿಯರು ಕಾಡಿನ ಕಲ್ಲು, ಕಾಡಿನ ನೀರು, ಕಾಡಿನ ಹೂ ಗಳನ್ನು ಬಳಸಿ ಸರಳ ರೀತಿಯಲ್ಲಿ ದೈವಾರಾಧನೆ ಮಾಡುತ್ತಿದ್ದರು.

ದೈವಾರಾಧನೆಯು ಸರಳ ರೀತಿಯಲ್ಲಿ ಇರಬೇಕು, ನಮ್ಮ ಹಿರಿಯರ ದೈವಾರಾಧನೆ ಪದ್ಧತಿ ಸರಳವಾಗಿದೆ. ಇದರಲ್ಲಿ ಆಡಂಬರ ಸರಿಯಲ್ಲ.ಅಂದರೆ ದೈವಾರಾಧನೆಯ ಮೂಲ ಸಂಸ್ಕೃತಿಯನ್ನು ಚಾಚು ತಪ್ಪದೆ ಪಾಲಿಸಬೇಕು.ಯಾವುದೇ ದೈವ ದೇವರ ಸಾನಿಧ್ಯ ಗಳು ಅಜೀರ್ಣವಸ್ಥೆ ಯಲ್ಲಿದ್ದರೆ ಆ ಗ್ರಾಮದಲ್ಲಿ ಅನೇಕ ತರದ ಕಷ್ಟ ನಷ್ಟ ಗಳು ಬಂದು ಗ್ರಾಮವು ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ದೈವ ದೇವರಿಗೆ ಪರಿಶುದ್ಧ ಮನಸ್ಸು,ಶ್ರದ್ದಾ ಭಕ್ತಿಯೇ ಮುಖ್ಯವಾಗಿದೆ.

ಕಾನ ಸಾನಿಧ್ಯ ದಲ್ಲಿ ವಿಶೇಷ ಶಕ್ತಿ ಇದೆ. ಎಲ್ಲರನ್ನು ತನ್ನತ್ತ ಸೆಳೆಯುವ ಪವಿತ್ರ ಸಾನಿಧ್ಯ ಶಕ್ತಿ ಇದೆ. ಪ್ರಸ್ತುತ ಜೀರ್ಣೋದ್ದಾರ ಕ್ಕೆ ದೈವ ಪ್ರೇರಣೆಯಾಗಿದೆ.ಗ್ರಾಮಸ್ಥರು ಒಂದೇ ಮನಸ್ಸಿನಿಂದ ಶ್ರದ್ದಾ ಭಕ್ತಿಯಿಂದ ಒಗ್ಗಟ್ಟಿನಲ್ಲಿ ದೈವ ದೇವರ ಸೇವೆಯಲ್ಲಿ ತೋಡಗಿದಾಗ ಮುಂದೆ ಆಗ ಬೇಕಾದ ಎಲ್ಲಾ ದೈವ ಕಾರ್ಯಗಳನ್ನು ಆ ದೈವಗಳೇ ಮಾಡಿಸಿಕೊಂಡು ಹೋಗುತ್ತಾರೆ.ಹಾಗೆಯೇ ಕಾನದಲ್ಲಿ ದೈವ ಸಂಕಲ್ಪ ದಂತೆ ಮುಂದೆ ನಡೆಯಲಿರುವ ದೈವ ಕಾರ್ಯಗಳಿಗೆ ನಮ್ಮ ಸಹಕಾರವು ಕೂಡ ಇದೆ ಎಂದು ಈ ಸಂದರ್ಭದಲ್ಲಿ ನುಡಿದರು.
ಸೋಮಂತಡ್ಕದ ದೈವರಾಧಕರು ಹಾಗೂ ಸಮಾಜ ಸೇವಕರಾದ ನಂದೀಶ್ ಕೆ ಭಂಡಾರಿ, ಸಮಾಜ ಸೇವಕರಾದ ರಾಮಚಂದ್ರ ಕಾನರ್ಪ ಸೋಮಂತಡ್ಕ, ಹಾಗೂ ಗ್ರಾಮದ ಎಲ್ಲಾ ಭಕ್ತ ಬಾಂದವರು ಉಪಸ್ಥಿತರಿದ್ದರು. ಫೆ. 20ರಂದು ಕಾನ ಸಾನಿಧ್ಯದಲ್ಲಿ ಸ್ಥಳ ಪ್ರಶ್ನೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ದಿನ ಗ್ರಾಮಸ್ಥರಿಂದ ಚಪ್ಪರ ಹಾಕುವ ಶ್ರಮದಾನ ನಡೆಯಿತು.