ಓಡೀಲು ಗರ್ಭಗುಡಿ ಪ್ರವೇಶಿಸುವ ಎಚ್ಚರಿಕೆ ನೀಡಿದ ಶಶಿಧರ ಶೆಟ್ಟಿ – ಅರ್ಚಕ ರಾಘವೇಂದ್ರ ಭಟ್ ವಿಚಾರದಲ್ಲಿ ವ್ಯವಸ್ಥಾಪನಾ ಸಮಿತಿಗೆ ಬಹಿರಂಗ ಸವಾಲು ಹಾಕಿದ ಹಿರಿಯ ಉದ್ಯಮಿ

0

ರಾಘವ ಶರ್ಮ ನಿಡ್ಲೆ.

ಬೆಳ್ತಂಗಡಿ: ನಮ್ಮೂರಿನ ದೇವಸ್ಥಾನಕ್ಕೆ ಯಾವುದೇ ತೊಂದರೆ ಉಂಟಾದರೂ ನಾನು ಸುಮ್ಮನಿರುವುದಿಲ್ಲ. ನನ್ನ ಜೀವ ಇರುವ ತನಕವೂ ದೇಗುಲದ ರಕ್ಷಣೆಗಾಗಿ ಹೋರಾಟ ಮಾಡುತ್ತೇನೆ. ನಾನು ಯಾರಿಗೂ ಹೆದರುವವನಲ್ಲ ಎಂದು ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಬೆಳ್ತಂಗಡಿ ತಾಲೂಕಿನ ಓಡೀಲು ದೇವಸ್ಥಾನದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದ್ದು, ದೇಗುಲದ ಅರ್ಚಕ ರಾಘವೇಂದ್ರ ಭಟ್‌ರನ್ನು ಗುರಿಯಾಗಿಸಿಕೊಂಡೆ ವಾಗ್ದಾಳಿ ನಡೆಸಿದ್ದಾರೆ. ಗುರುವಾಯನಕರೆಗೆ ಸನಿಹದ ಅರಮಲೆ ಬೆಟ್ಟ ದೈವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಓಡೀಲು ದೇಗುಲ ವಿವಾದ ಪ್ರಸ್ತಾಪಿಸಿದ ಶಶಿಧರ ಶೆಟ್ಟಿಯವರು, ಒಂದುವೇಳೆ ಹಾಲಿ ವ್ಯವಸ್ಥಾಪನಾ ಸಮಿತಿ ರಾಘವೇಂದ್ರ ಭಟ್ಟರನ್ನು ಪ್ರಧಾನ ಅರ್ಚಕರನ್ನಾಗಿ ನೇಮಿಸಿ, ಗರ್ಭಗುಡಿ ಪ್ರವೇಶಿಸುವಂತೆ ಮಾಡಿದಲ್ಲಿ, ತಾನೂ ನೇರವಾಗಿ ಗರ್ಭಗುಡಿ ಪ್ರವೇಶಿಸಿ ದೇವರನ್ನು ಮುಟ್ಟಿ ಪ್ರಾರ್ಥನೆ ಮಾಡಲಿದ್ದೇನೆ. ಯಾರು ಏನೇ ಹೇಳಿದರೂ, ಈ ವಿಷಯದಲ್ಲಿ ನನ್ನ ನಿಲುವು ಸ್ಪಷ್ಟ ಎಂದು ಹೇಳಿದ್ದಾರೆ.ನಾನು ಅನ್ಯಾಯ, ವಂಚನೆ ಮಾಡಿದವನಲ್ಲ. ಯಾರಿಗೂ ಭಯ ಪಡಲಾರೆ. ನಾಲೈದು ಗ್ರಾಮಗಳಿಗೆ ಸಂಬಂಧಿಸಿದ ದೇವಸ್ಥಾನವನ್ನು ಲಗಾಡಿ ತೆಗೆದ ಒಂದೇ ಒಂದು ಭಟ್ಟ ಇದ್ದರೆ ಅದು ರಾಘವೇಂದ್ರ ಭಟ್ಟ, ಅವನನ್ನು ದೇವರು ಖಂಡಿತಾ ಬಿಡಲಾರ. ಕಾಂಗ್ರೆಸ್, ಬಿಜೆಪಿ, ಆ ಪಕ್ಷ ಈ ಪಕ್ಷ ಎಂದು ವಾದಿಸಿಕೊಂಡು ಬಂದರೆ ನಾನು ದೇವರನ್ನು ಮುಟ್ಟುವುದಂತೂ ಗ್ಯಾರಂಟಿ…ಗ್ಯಾರಂಟಿ…ಗ್ಯಾರಂಟಿ. ಇದನ್ನು ನಾನು ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ರಾಘವೇಂದ್ರ ಭಟ್ಟರು ಒಳಗೆ ಹೋಗಿ ದೇವರಿಗೆ ಪೂಜೆ ಮಾಡಿದರೆ ನಾನು ದೇವರನ್ನು ಮುಟ್ಟುವುದು ಖಂಡಿತ ಖಂಡಿತ ಖಂಡಿತ ಎಂದು ಶಶಿಧರ ಶೆಟ್ಟರು ಬಹಿರಂಗ ಸವಾಲು ಹಾಕಿದ್ದಾರೆ. ನನಗೆ ಯಾವ ಪಕ್ಷದ ಬಗ್ಗೆಯೂ ಚಿಂತೆಯಿಲ್ಲ. ದೇವರ ಮುಂದೆ ಎಲ್ಲವೂ ನಗಣ್ಯ. ಓರ್ವ ಭಟ್ಟರಿಂದ 5 ಗ್ರಾಮಗಳಿಗೆ ಹೆಚ್ಚು-ಕಡಿಮೆಯಾದಲ್ಲಿ ಅದಕ್ಕೆ ಊರಿನವರು ಹೊಣೆ ಅಲ್ಲ. ಭಟ್ಟರೇ ನೇರ ಹೊಣೆ. ಯಾರಾದರೂ ತಿಳಿದವರು ಬುದ್ದಿವಾದ, ಕಿವಿಮಾತು ಹೇಳುವುದಿದ್ದರೆ ಅವರಿಗೆ ಈಗಲೇ ಹೇಳಬೇಕು. ಕಾಲ ಮೀರಿದ ನಂತರ ನಮಗೆ ಬುದ್ಧಿ ಹೇಳಲು ಬರಬೇಡಿ. ಸಾಮಾನ್ಯವಾಗಿ ನಾನು ಇಷ್ಟೊಂದು ಬಿರುಸಿನ ಧ್ವನಿಯಲ್ಲಿ ಮಾತನಾಡುವುದಿಲ್ಲ. ಆದರೆ, ಕೆಲವೊಮ್ಮೆ ಸತ್ಯ ವಾಸ್ತವಗಳನ್ನು ಹೇಳಬೇಕಾಗುತ್ತದೆ. ನಾನು ಆಸ್ತಿ ಬದುಕಿನ ಬಗ್ಗೆ ಹೆಚ್ಚು ಯೋಚನೆ ಮಾಡಿದವನಲ್ಲ ಎಂದು ಖಡಕ್ ಧ್ವನಿಯಲ್ಲೇ ಮಾತನಾಡಿದರು.ನಮ್ಮೂರಿನಲ್ಲಿ ದೈವದ ನೇಮಗಳು ಸುಂದರವಾಗಿ ನಡೆಯುತ್ತವೆ. ಕೈವ ಪ್ರಸಾದವನ್ನೂ ನೀಡುತ್ತದೆ. ದೈವ ಅಸ್ಪೃಶ್ಯತೆ ಮಾಡುವುದೇ? ನಮ್ಮ ಕೈಯನ್ನು ಹಿಡಿದುಕೊಂಡು ಪ್ರಸಾದವನ್ನು ದೈವ ನೀಡುತ್ತದೆ. ದೇವಸ್ಥಾನದಲ್ಲಿ ಕೊಟ್ಟ ಕೆಲಸವನ್ನು ನಿಷ್ಠೆ, ಶ್ರದ್ದೆಯಿಂದ ಮಾಡಿದಾಗ ಗೌರವ ನೀಡಬಹುದು. ಆದರೆ, ಮನಸೋಇಚ್ಛೆಯಂತೆ ದೇವರಪೂಜೆ ಮಾಡಿದರೆ ಅದನ್ನು ಒಪ್ಪಲಾಗುವುದಿಲ್ಲ. ದೇವಸ್ಥಾನದ ವೈದಿಕರು ಬಾವಿಯಲ್ಲಿ ಮಡಿ ಸ್ನಾನ ಮಾಡಿ ಬಂದು, ದೇವರಿಗೆ ಪೂಜೆ ಮಾಡಿ ಸಾಷ್ಟಾಂಗ ನಮಸ್ಕಾರ ಮಾಡುವ ತನಕ ಅವರನ್ನು ಭಕ್ತರು ಮುಟ್ಟುವಂತಿಲ್ಲ. ಏಕೆಂದರೆ ಅವರು ಮಡಿಯಲ್ಲಿರುತ್ತಾರೆ. ನಂತರ ಅವರನ್ನು ಸ್ಪರ್ಶಿಸಬಹುದು. ಅದರಲ್ಲಿ ಯಾವುದೇ ತೊಂದರೆಯಿಲ್ಲ. ಯಾವುದೇ ತಪ್ಪುಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಹೋಗುವ ಧೋರಣೆ ವೈದಿಕರಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.ದೇವರನ್ನು ಮುಟ್ಟಿ ಪೂಜೆ ಮಾಡುವ, ದರ್ಶನ ಪಡೆಯುವ ಪದ್ಧತಿ ಅನೇಕ ಕಡೆ ಜಾರಿಯಲ್ಲಿದೆ. ನಮ್ಮೂರಿನ ಪೂಜಾ ಪದ್ಧತಿಗಳು ಬೇರೆ. ಅದನ್ನು ನಾನು ಒಪ್ಪಿಕೊಳ್ಳುವೆ. ಆದರೆ, ಪೂಜೆ ಮಾಡುವವರು ಸರಿ ಇದ್ದಾಗ ಮಾತ್ರ ಅದನ್ನೊಪ್ಪಿಕೊಳ್ಳಬಹುದು. ದೂರದಿಂದ ಪ್ರಸಾದ ಎಸೆಯುವುದು, ಮಗುವೊಂದು ಪ್ರಸಾದ ತಿಂದಾಗ ಅದನ್ನು ಹೊರ ಹಾಕುವುದನ್ನು ಒಪ್ಪಬಹುದೇ? ಪೂಜೆ ಮಾಡುವಾಗ ಹೆಣ್ಣು ಮಗುವೊಂದು ಬಂದರೆ ನಾನು ಅವಳನ್ನು ದೇವಿ ಎಂದು ಸ್ವೀಕರಿಸುವೆ ಅಥವಾ ಬಾಲಕ ಬಂದರೆ ಕೃಷ್ಣ ಎಂದು ಸ್ವಾಗತಿಸುವೆ ಎಂದು ತಿಳಿಸಿದರು.ತಂತ್ರಿಗಳಾದ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ಜಾತ್ರೆ ನಡೆದಿತ್ತು, ನಂತರ 12 ವರ್ಷಗಳಿಗೆ ಅನ್ವಯವಾಗುವ ನಿರ್ಣಯಗಳನ್ನು ದಿಟ್ಟಂನಲ್ಲಿ ಮಾಡಲಾಯಿತು. ಇಲ್ಲಿ (ಅರಮಲೆಬೆಟ್ಟ) ಕುಂಭ ಕಲಶ ನಡೆದಿದೆ. ಇನ್ನು ಮುಂದಿನ 12 ವರ್ಷಗಳ ನಂತರ ನಿಮಗೆ ತೇರು ಸಿಗುತ್ತದೆ ಎಂದು ವೈದಿಕರು ತಿಳಿಸಿದ್ದಾರೆ. ಆದರೆ, ನಾಳೆ ಇದಕ್ಕೆ ಕ್ಯಾತೆ ತೆಗೆದು ಇದೊಂದು ಬರೀ ಚೆಂಬು ಎಂದರೆ ವಾದಿಸಿದರೆ ಅದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು.ಓಡೀಲು ಬ್ರಹ್ಮಕಲಶೋತ್ಸವ ಬಹಳ ಚೆನ್ನಾಗಿ ನಡೆದಿತ್ತು ಎಂದು ನೆನಪಿಸಿಕೊಂಡ ಅವರು, ಯಾರು ಜಾತ್ರೆ ಆಗಬಾರದು ಎಂದು ಹೇಳಿದ್ದರೋ ಅವರ ಕೈಯಲ್ಲೇ ದೇವರು ಜಾತ್ರೆ ಮಾಡಿಸಿದರು. ಯಾರು ದೇವರಿಗೆ ಹಣಕೊಡಬೇಡಿ ಎಂದಿದ್ದರೋ ಅವರೇ ಹಣ ಕೊಟ್ಟರು. ವಿಷ್ಣು ಭಟ್ಟರು ದೇವರನ್ನು ಹೊತ್ತುಕೊಂಡು ದರ್ಶನ ಬಲಿ ಮಾಡಿದಾಗ ನನಗೆ ಬಹಳ ಸಂತೋಷವಾಯ್ತು. ಅದನ್ನೇ ನಾನು ದೇವರಲ್ಲಿ ಬೇಡಿಕೊಂಡದ್ದು. ಅದು ಈಡೇರಿದ ಸಂತೃಪ್ತಿಯಿದೆ ಎಂದು ಹೇಳಿದರು.

ಸದ್ಯದ ಸ್ಥಿತಿ ಏನು: ಓಡೀಲು ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮುಗಿದಿದೆ. ಹೊಸ ವ್ಯವಸ್ಥಾಪನಾ ಸಮಿತಿ ಉಸ್ತುವಾರಿಯಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದಿವೆ. ಹೊಸ ಸಮಿತಿಯಲ್ಲಿ ರಾಘವೇಂದ್ರ ಭಟ್ಟರಿಗೆ ಪದ ನಿಮಿತ್ತ (8+1) ಸದಸ್ಯತ್ವ ಸಿಕ್ಕಿದೆ. ಇದು ಹಿಂದಿನ ವ್ಯವಸ್ಥಾಪನಾ ಸಮಿತಿ ಆಕ್ರೋಶಕ್ಕೆ ಕಾರಣವಾಗಿರುವುದಲ್ಲದೆ, ಅವರನ್ನು ಪ್ರಧಾನ ಅರ್ಚಕರನ್ನಾಗಿ ನೇಮಿಸುವ ಬಗ್ಗೆ ಹೊಸ ಸಮಿತಿ ಚಿಂತನೆ ನಡೆಸಿದೆ ಎಂಬ ಮಾತುಗಳಿವೆ. ಒಂದುವೇಳೆ, ಇದು ನಿಜವಾದರೆ ಗರ್ಭಗುಡಿ ಪ್ರವೇಶಿಸುವ ಎಚ್ಚರಿಕೆಯನ್ನು ಹಿಂದಿನ ವ್ಯ

ಸುದ್ದಿ ಬಿಡುಗಡೆಗೆ ಶಶಿಧರ ಶೆಟ್ಟಿ ಸಲಹೆ ನೀವು (ಸುದ್ದಿ ಬಿಡುಗಡೆ) ಓಡೀಲು ಬಗ್ಗೆ ಬರೆದಿದ್ದೀರಿ. ಅದನ್ನು ಮತ್ತೆ ಪರಾಮರ್ಶೆ ಮಾಡಿ, ನೀವಿರುವುದು ಸಮಾಜವನ್ನು ತಿದ್ದಲು. ನಾನು ತಿದ್ದಲು ಶಿಕ್ಷಕನಲ್ಲ. ನನ್ನ ಅನುಭವ ಹೇಳುತ್ತೇನಷ್ಟೇ. ಇದನ್ನು ಹೇಳಲು ಯಾರ ಅನುಮತಿಯೂ ನನಗೆ ಬೇಡ. ಪತ್ರಿಕೆಯಲ್ಲಿ ಎಲ್ಲರಿಗೂ ಸಮಾನ ಸ್ಥಳಾವಕಾಶ ನೀಡಿ ಅಭಿಪ್ರಾಯ ಹಾಕಬೇಕು. ರಾಘವೇಂದ್ರ ಭಟ್ಟರು ಗರ್ಭಗುಡಿಗೆ ಹೋದರೆ ನಾನು ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ. ಧಾರ್ಮಿಕ ಸಭೆಯಲ್ಲಿ ಈ ರೀತಿ ಮಾತನಾಡಿದ್ದಕ್ಕೆ ಕ್ಷಮೆ ಇರಲಿ. ಆದರೆ ನಾನು ಧಾರ್ಮಿಕ ವಿಧಿ-ವಿಧಾನಗಳ ಬಗ್ಗೆಯೇ ಮಾತನಾಡಿದ್ದೇನೆ ಎಂದು ಶಶಿಧರ ನ್ನು ಪ್ರಸ್ತಾಪಿಸುತ್ತಾ, ಅದನ್ನು ಶೆಟ್ಟರು ಸುದ್ದಿ ಬಿಡುಗಡೆ ವರದಿಯನ್ನು ವ ಪರಾಮರ್ಶಿಸಲು ಸಲಹೆ ನೀಡಿ, ತಮ್ಮ ವಾದ ಮುಂದಿಟ್ಟರು.

ಸುದ್ದಿ ಬಿಡುಗಡೆ ಸ್ಪಷ್ಟನೆ: ಓಡೀಲು ದೇಗುಲ ವಿವಾದವನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಭಕ್ತಾದಿಗಳು ನೀಡಿರುವ ಅಭಿಪ್ರಾಯಗಳನ್ನು, ಅದರ ವಾಸ್ತವ ಸ್ಥಿತಿಯನ್ನು ಮುಂದಿಡುವ ಯತ್ನವನ್ನು ಸುದ್ದಿ ಬಿಡುಗಡೆ ಮಾಡಿದೆ. ಎಲ್ಲರ ಅಭಿಪ್ರಾಯಗಳನ್ನು ಪಡೆದು, ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಕಳೆದವಾರ ವರದಿ ಮಾಡಲಾಗಿದೆ. ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಮತ್ತೊಮ್ಮೆ ಕುಳಿತು ಓದಬಹುದು. ಇದು ಜನರ ಪತ್ರಿಕೆ ಮತ್ತು ಅವರ ಧ್ವನಿ. ಓಡೀಲು ವಿವಾದದ ಕೇಂದ್ರಬಿಂದು ಯಾರು ಎಂಬುದನ್ನು ತಿಳಿದುಕೊಂಡೇ ಅವರ ಅಭಿಪ್ರಾಯಗಳನ್ನೂ ಪಡೆದು ಪ್ರಕಟಿಸಲಾಗಿದೆ. ಹಿಂದಿನ ಮತ್ತು ಈಗಿನ ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಮಾತನಾಡಿಸಿ, ಅವರ ನಿಲುವುಗಳನ್ನು ಪ್ರಕಟಿಸಲಾಗಿದೆ. ವಾದ ಪ್ರತಿವಾದಗಳನ್ನೊಂಡ ಸಮತೋಲಿತ ವರದಿ ಮಾಡುವುದೇ ನಮ್ಮ ಧೈಯ ಉದ್ದೇಶ ಎಂದು ಸ್ಪಷ್ಟಪಡಿಸುತ್ತೇವೆ. ಪತ್ರಿಕೆ ವರದಿ ಯಾವುದೋ ಒಂದು ಕಡೆಯಾಗದೆ, ನ್ಯಾಯಯುತವಾಗಿ ಇರಲು ಪ್ರಯತ್ನಿಸಿದ್ದೇವೆ. ಶಶಿಧರ ಶೆಟ್ಟರು ನೀಡಿರುವ ಅಭಿಪ್ರಾಯಗಳನ್ನು ಪ್ರಕಟಿಸಿದ್ದೇವೆ. ಆದರೂ ಅವರ ಸಲಹೆ ಹಾಗೂ ಇತರ ಭಕ್ತಾದಿಗಳು ನೀಡುವ ಸಲಹೆಗಳನ್ನು ಸ್ವಾಗತಿಸುತ್ತೇವೆ.

LEAVE A REPLY

Please enter your comment!
Please enter your name here