ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಉನ್ನತಿಯಲ್ಲಿ ಸುನಿಲ್ ರೆಡಿವೇರ್ಸ್ ಶುಭಾರಂಭ

0

ಧರ್ಮಸ್ಥಳ: ಕಲ್ಲೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉನ್ನತಿ ವಾಣಿಜ್ಯ ಸಂಕೀರ್ಣದಲ್ಲಿ ಸುನಿಲ್ ರೆಡಿವೇರ್ಸ್ಸಿ ದ್ಧ ಉಡುಪುಗಳು ಮಳಿಗೆ ಫೆ. 14ರಂದು ಶುಭಾರಂಭಗೊಂಡಿತು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇ೦ದ್ರ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ, ದೀಪ ಬೆಳಗಿಸಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಸೀತಾರಾಮ್ ಟೋಲ್ಪಡಿತ್ತಾಯ, ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ., ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಧರ್ಮಸ್ಥಳ ಅಶ್ವಿನಿ ಕ್ಲಿನಿಕ್ ನ ಡಾ. ಮೃಣಾಲಿನಿ, ಶ್ರೀಧರ ರಾವ್, ನಿವೃತ್ತ ಶಿಕ್ಷಕಿ ಕಲಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಾಲಕ ವಿನೋದ್ ಕುಮಾರ್ ಸಿ.ಎಚ್., ಆದರ್ಶ ಕೆ.ಜೆ., ಸುನಿಲ್ ಉಪಸ್ಥಿತರಿದ್ದರು. ಪವಿತ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here