

ಇಂದಬೆಟ್ಟು: ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಕ್ಷಯ ಮುಕ್ತ ಭಾರತ ಅಭಿಯಾನದಡಿಯಲ್ಲಿ 100 ದಿನಗಳ ಸಕ್ರೀಯ ಕ್ಷಯ ಪತ್ತೆ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಷಯ ಶಿಬಿರದಲ್ಲಿ ದುರ್ಬಲ ವರ್ಗದ ಜನರಿಗೆ ಕಫ ಪರೀಕ್ಷೆ, ಆಪ್ತ ಸಮಾಲೋಚನೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ x-ray ಮಾಡಿಸುವ ಮೂಲಕ ಕ್ಷಯ ರೋಗ ತಪಾಷಣೆ ನಡೆಸಲಾಯಿತು.
ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಧಿಕಾರಿಗಳು, ಪ್ರಸನ್ನ ಆಯುರ್ವೇದ ಕಾಲೇಜಿನ ಬಿ.ಎ.ಎಮ್.ಎಸ್ (BAMS) ವೈದ್ಯ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು ಇಲ್ಲಿನ ಸಿಬ್ಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದಲ್ಲಿ ಆಶಾಲತಾ ಅಧ್ಯಕ್ಷರು ಇಂದಬೆಟ್ಟು ಗ್ರಾಮ ಪಂಚಾಯತ್, ಮನಮೋಹನ್ ಹಿರಿಯ ಕ್ಷಯ ರೋಗ ಚಿಕಿತ್ಸ ಮೇಲ್ವಿಚಾರಕರು ಮತ್ತು ವೈದ್ಯಧಿಕಾರಿಗಳು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಿತ್ ಕಾರ್ಯಕ್ರಮ ಸ್ವಾಗತಿಸಿ, ವಂದಿಸಿದರು.